Ad imageAd image

ಸಿಂದಗಿ: ಯತ್ನಾಳ್ ಉಚ್ಛಾಟನೆ ಖಂಡಿಸಿ ಪ್ರತಿಭಟನೆ

Nagesh Talawar
ಸಿಂದಗಿ: ಯತ್ನಾಳ್ ಉಚ್ಛಾಟನೆ ಖಂಡಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿರುವುದನ್ನು ಖಂಡಿಸಿ ಅಖಿಲ ಭಾರತ ಪಂಚಮಸಾಲಿ ಸಮಾಜ ಸಿಂದಗಿ ತಾಲೂಕು ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದ ಎದುರು ಟೈರ್ ಗೆ ಬೆಂಕಿ ಹಚ್ಚಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ವೇಳೆ ತಾಲೂಕಾದ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಬಿಜೆಪಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ ರಾಜಕಾರಣಿ ಹಾಗೂ ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಕೊಡಿಸುವ ನಿಟ್ಟಿನಲ್ಲಿ ಸದನದ ಒಳ ಹೊರಗು ಧ್ವನಿ ಎತ್ತಿದ ಏಕೈಕ ವ್ಯಕ್ತಿ. ಇವರನ್ನು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಧ್ಯಕ್ಷ ವಿಜಯೇಂದ್ರ ಅವರ ಮಾತಿಗೆ ಜೋತುಬಿದ್ದು ಬಿಜೆಪಿ ಪಕ್ಷದ ಕೇಂದ್ರದ ವರಿಷ್ಠರು ಉಚ್ವಾಟಿಸಿರುವುದು ಖೇದಕರ ಸಂಗತಿ. ಅದನ್ನು ಮರು ಪರಿಶೀಲನೆ ಮಾಡಿ ಉಚ್ಚಾಟಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ಮಹೇಶ ಪಾಟೀಲ ನಾಗರಳ್ಳಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬರಬೇಕಾದರೆ ಬಸನಗೌಡ ಪಾಟೀಲ ಅವರ ಕೊಡುಗೆ ಅನನ್ಯ. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಾದರೆ ರಾಜ್ಯದ ಹಾಗೂ ಜಿಲ್ಲೆಯ ವರಿಷ್ಠರ ಸಮಾಲೋಚನೆ ಮಾಡುವ ಮೂಲಕ ಭೂತ ಮಟ್ಟದ ಕಾರ್ಯಕರ್ತರ ಚರ್ಚೆಗೆ ತೆಗದುಕೊಂಡು ಇಂತಹ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು ಎಂದರು. ಭಾರತೀಯ ಕಿಸಾನ್ ಸಂಘದ ಬಸವರಾಜ ಐರೋಡಗಿ, ಶಿವರಾಜ ಪೊಲೀಸಪಾಟೀಲ, ಕಾರ್ಯದರ್ಶಿ ಆನಂದ ಶಾಬಾದಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪ್ರಶಾಂತ ಬಿರಾದಾರ, ಮಲ್ಲನಗೌಡ ಪಾಟೀಲ ಇಬ್ರಾಹೀಂಪುರ, ಕಲ್ಯಾಣಿ ಬಿರಾದಾರ, ಸಂಗಮೇಶ ಯಲಗೋಡ, ಶಿವು ಬಡಾನೂರ, ರಾಜು ಮುಜಗೊಂಡ, ಅಶೋಕ ಬಾದನ್, ಈರಣ್ಣ ಕಲಬುರ್ಗಿ, ಸಂತೋಷ ನಂದಶೆಟ್ಟಿ, ನಾನಾಗೌಡ ಪಾಟೀಲ, ಗಿರೀಶ ಪಾಟೀಲ ಕೊರಳ್ಳಿ, ಶ್ರೀಶೈಲ ಗಾಡದ, ಅನೀಲ ಪಾಟೀಲ, ಅಮೀತ ಬಿರಾದಾರ, ಗುರು ನೆಗಿನಾಳ, ಶ್ರೀಶೈಲ ಗುಂದಗಿ, ಮಲ್ಲು ನಂದಶೆಟ್ಟಿ, ಹಣಮಂತ ಗಾಡದ, ಬಸು ಗಾಡದ, ಕಿರಣ ನಂದಶೆಟ್ಟಿ, ಸುನೀಲ ಪಾಟೀಲ, ಗುರು ಬಡಾನೂರ, ರಾಮನಗೌಡ ಬಂದಾಳ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

WhatsApp Group Join Now
Telegram Group Join Now
Share This Article