ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): 12ನೇ ಶತಮಾನದ ಶರಣ, ಶರಣೆಯರ ಆದರ್ಶಮಯ ಹಾಗೂ ಸಮಾಜೋಧಾರ್ಮಿಕ ಬದುಕಿನ ಕುರಿತು ಮನೆ ಮನೆಗೂ ತಲುಪಿಸುವ ಕೆಲಸವನ್ನು ತಾಲೂಕು ವಚನೋತ್ಸವ ಸಮಿತಿ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಕಳೆದ ಹಲವು ವರ್ಷಗಳಿಂದ ಪ್ರತಿ ಶುಕ್ರವಾರ ಸಂಜೆ ಒಬ್ಬರ ಮನೆಯಲ್ಲಿ ವಚನಕಾರೊಬ್ಬರ ವಚನ ಪಠಣ ಹಾಗೂ ವಿಶ್ಲೇಷಣೆ ನಡೆಸಿಕೊಂಡು ಬರಲಾಗುತ್ತಿದೆ. ಜನವರಿ 24, 2025 ಶುಕ್ರವಾರ ಸಂಜೆ ನಾಗೂರ ಬಡಾವಣೆ ನಿವಾಸಿಗಳಾದ ಬೇಬಿ ಭಾಗಣ್ಣ ದುಗುಂಡ ಹಾಗೂ ಭಾಗಣ್ಣ ಗುರುಲಿಂಗಪ್ಪ ದುಗುಂಡ ಇವರ ನಿವಾಸದಲ್ಲಿ 269ನೇ ವಚನೋತ್ಸವ ನಡೆಸಲಾಯಿತು.
ಶರಣ ಬಂಧುಗಳು, ಸಾಹಿತಿಗಳು, ಜಾನಪದ ವಿದ್ವಾಂಸರು, ಶಿಕ್ಷಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಕೂಡಿಕೊಂಡು ಅಣ್ಣ ಬಸವಣ್ಣನವರ ‘ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎನ್ನುವ ವಚನ ಪಠಣ ಹಾಗೂ ವಿಶ್ಲೇಷಣೆ ನಡೆಸಲಾಯಿತು. ನಂತರ ಮನೆಯಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಯಿತು. ಹೀಗೆ ಪ್ರತಿ ಶುಕ್ರವಾರ ಸಂಜೆ 6 ಗಂಟೆಗೆ ಒಬ್ಬ ಶರಣೆ ಅಥವ ಶರಣೆಯ ಒಂದು ವಚನ ಆಯ್ಕೆ ಮಾಡಿಕೊಂಡು ಅದರ ಕುರಿತು ಚಿಂತನ ಮಂಥನ ನಡೆಸಿಕೊಂಡು ಬರಲಾಗುತ್ತಿದೆ.