Ad imageAd image

ರೇಮಂಡ್ ಸಂಸ್ಥೆಯ ದಿಗ್ಗಜ ಸಿಂಘಾನಿಯಾ ನಿಧನ

Nagesh Talawar
ರೇಮಂಡ್ ಸಂಸ್ಥೆಯ ದಿಗ್ಗಜ ಸಿಂಘಾನಿಯಾ ನಿಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಜವಳಿ ಉದ್ಯಮಿ, ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ ಪದ್ಮಭೂಷಣ ವಿಜಯಪತ್ ಸಿಂಘಾನಿಯಾ(87) ಅವರು ಶನಿವಾರ ಸಂಜೆ ನಿಧನರಾಗಿದ್ದಾರೆ. ಇವರ ಮಗ ಗೌತಮ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ಮ 3 ಗಂಟೆಗೆ ಚಾಂದವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

20 ವರ್ಷಗಳ ಕಾಲ ರೇಮಂಡ್ ಸಮೂಹದ ಅಧ್ಯಕ್ಷರಾಗಿದ್ದರು. ಬಳಿಕ ಮಗ ಗೌತಮ್ ಗೆ ಅಧಿಕಾರಿ ಹಸ್ತಾಂತರಿಸಿದರು. ಸಂಸ್ಥೆಯಲ್ಲಿದ್ದ ಶೇಕಡ 37ರಷ್ಟು ಪಾಲನ್ನು ಸಹ ಮಗನಿಗೆ ಹಸ್ತಾಂತರಿಸಿದ್ದರು. ಜವಳಿ ಉದ್ಯಮದ ಜೊತೆಗೆ ಸಿಮೆಂಟ್, ಸ್ಟೀಲ್, ಡೆನಿಮ್ ಕ್ಷೇತ್ರಗಳಿಗೂ ಉದ್ಯಮ ವಿಸ್ತರಿಸಿದ್ದರು. ವಿಮಾನಯಾದ ಬಗ್ಗೆಯೂ ಆಸಕ್ತಿ ಹೊಂದಿದ್ದರು. 1988ರಲ್ಲಿ ಲಂಡನ್ ನಿಂದ ನವದೆಹಲಿಯ ತನಕ ಮೈಕ್ರೋಲೈಟ್ ಏರ್ ಕ್ರಾಪ್ಟ್ ನಲ್ಲಿ 23 ದಿನಗಳ ಕಾಲ ಏಕಾಂಗಿಯಾಗಿ ಹಾರಾಟ ನಡೆಸಿದ್ದರು. ಅಲ್ಲದೆ 67ನೇ ವಯಸ್ಸಿನಲ್ಲಿ 69 ಸಾವಿರ ಅಡಿ ಎತ್ತರದವರೆಗೆ ಬಿಸಿ ಗಾಳಿಯ ಬಲೂನ್ ನಲ್ಲಿ ಏರುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

WhatsApp Group Join Now
Telegram Group Join Now
Share This Article