ಪ್ರಜಾಸ್ತ್ರ ಸುದ್ದಿ
ಈಡ್ಜಬಾಸ್ಟನ್(Edgbaston): ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು 29 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 407 ರನ್ ಗಳಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದ್ದಾರೆ. ಈ ವೇಳೆ ಬರೋಬ್ಬರಿ 6 ಆಟಗಾರರನ್ನು ಶೂನ್ಯಕ್ಕೆ ಔಟ್ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಜೋಡಿ ಸಾಧನೆ ಮಾಡಿದೆ.
ಮೊಹಮ್ಮದ್ ಸಿರಾಜ್ 6 ಹಾಗೂ ಆಕಾಶ್ ದೀಪ್ 4 ವಿಕೆಟ್ ಪಡೆಯುವ ಮೂಲಕ 1996ರ ಬಳಿಕ ಇಂತಹದೊಂದು ಸಾಧನೆ ಬಂದಿದೆ. ಅಂದು ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 6 ಆಟಗಾರರನ್ನು ಶೂನ್ಯಕ್ಕೆ ಔಟ್ ಮಾಡಲಾಗಿದೆ. ಕನ್ನಡಿಗರಾದ ಜಾವಗಲ್ ಶ್ರೀನಾಥ್ ಹಾಗೂ ಅನಿಲ್ ಕುಂಬ್ಳೆ ಭರ್ಜರಿ ವಿಕೆಟ್ ಪಡೆದಿದ್ದರು. ಶ್ರೀನಾಥ್ 4 ಆಟಗಾರರನ್ನು, ಕುಂಬ್ಳೆ ಇಬ್ಬರನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಇಂದು ಸಿರಾಜ್, ಆಕಾಶ್ ದೀಪ್ ಇಬ್ಬರೇ ಎಲ್ಲ ವಿಕೆಟ್ ಪಡೆದಿದ್ದಾರೆ.
ಜಮೈ ಸ್ಮಿತ್ 184, ಹ್ಯಾರಿ ಬ್ರೋಕ್ 158 ರನ್ ಗಳನ್ನು ಬಾರಿಸಿರುವುದಿಂದ 400 ರನ್ ಗಳ ಗಡಿ ದಾಟಿದ್ದಾರೆ. ಇಲ್ಲದೆ ಹೋದ್ರೆ ನೂರರ ಒಳಗೆ ಆಲೌಟ್ ಆಗುವ ಸಾಧ್ಯತೆಯಿತ್ತು. ಬೆನ್ ಡಕೆಟ್ 0, ಒಲೆ ಪೊಪೆ 0, ನಾಯಕ ಬೆನ್ ಸ್ಟೋಕ್ 0, ಬ್ರೈಡನ್ ಕ್ರೆಸ್ 0, ಜೋಸ್ ಟೊನೇಜ್ 0 ಹಾಗೂ ಶೋಹಿಬ್ ಬಷೀರ್ 0 ಕ್ಕೆ ಔಟ್ ಆಗುವ ಮೂಲಕ 180 ರನ್ ಗಳ ಹಿನ್ನಡೆ ಅನುಭವಿಸಿದೆ. 2ನೇ ಇನ್ನಿಂಗ್ಸ್ ಆಡುತ್ತಿರುವ ಭಾರತ 64ಕ್ಕೆ 1 ವಿಕೆಟ್ ಕಳೆದುಕೊಂಡಿದೆ. ಜೈಸ್ವಾಲ್ 28 ರನ್ ಗೆ ಔಟ್ ಆಗಿದ್ದಾರೆ. ಕೆ.ಎಲ್ ರಾಹುಲ್ 28, ಕರುಣ್ ನಯರ್ 8 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ.