Ad imageAd image

ಮೈಸೂರಿನಲ್ಲಿ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಸಿದ್ದರಾಮಯ್ಯ

Nagesh Talawar
ಮೈಸೂರಿನಲ್ಲಿ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಬುಧವಾರ ನಿಧನರಾಗಿದ್ದು, ಗುರುವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಸಿಎಂ ಈ ವೇಳೆ ಭೈರಪ್ಪ ಕುಟುಂಬಸ್ಥರೊಂದಿಗೆ ಮಾತನಾಡಿದರು. ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಹೇಳಿದರು.

ಭೈರಪ್ಪ ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಸರಸ್ವತಿ ಸಮ್ಮಾನ್ ಪಡೆದಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಅದಕ್ಕೆ ಅವರು ಅರ್ಹರಾಗಿದ್ದರು. ಮೈಸೂರಿನಲ್ಲಿ ಹೆಚ್ಚು ಕಾಲ ಇದ್ದರು. ಮೈಸೂರಿನಲ್ಲೇ ಸ್ಮಾರಕ ನಿರ್ಮಿಸಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭೈರಪ್ಪ ಅವರು ಕನ್ನಡದ ಅದ್ವಿತೀಯ ಸಾಹಿತಿ. ಭಾರತ ಮಾತ್ರವಲ್ಲ, ಹೊರದೇಶದಲ್ಲಿಯೂ ಅವರು ಜನಪ್ರಿಯರು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು. ಸಚಿವರಾದ ಶಿವರಾಜ ತಂಗಡಗಿ, ಮಧು ಬಂಗಾರಪ್ಪ, ಸಂಸದ ತೇಜಸ್ವಿಸೂರ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು, ಅವರ ಅಭಿಮಾನಿಗಳು, ಸಾಹಿತ್ಯ ವಲಯದವರು ಅಂತಿಮ ದರ್ಶನ ಪಡೆದರು.

WhatsApp Group Join Now
Telegram Group Join Now
Share This Article