ಪ್ರಜಾಸ್ತ್ರ ಸುದ್ದಿ
ಗಂಗಾವತಿ(Gangavati): ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಎಂದು ಸರ್ಕಾರ ಘೋಷಿಸಿದೆ. ಈ ವೇಳೆ ಸರ್ಕಾರಿ ಕಚೇರಿಗಳ ಮೇಲೆ ಧ್ವಜವನ್ನು ಅರ್ಧಕ್ಕೆ ಹಾರಿಸಬೇಕು ಎಂದು ಹೇಳಿದೆ. ಆದರೆ, ತಾಲೂಕಿನ ಹಲವು ಕಚೇರಿಗಳ ಮೇಲೆ ಧ್ವಜವನ್ನು ಅರ್ಧಕ್ಕೆ ಹಾರಿಸದೆ ಬುಧವಾರ ನೀಡಿದ ರಜೆಯನ್ನು ಮಜವಾಗಿ ಅಧಿಕಾರಿಗಳು ಕಳಿಯುತ್ತಿದ್ದಾರೆ ಎಂದು ಸಂಘಟನೆಗಳು, ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.
ತಾಲೂಕು ಆಡಳಿತ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಬಿಇಒ ಕಚೇರಿ ಕಟ್ಟಡಗಳ ಮೇಲೆ ಧ್ವಜವನ್ನು ಅರ್ಧಕ್ಕೆ ಹಾರಿಸದೆ ಇರುವುದು ಕಂಡು ಬಂದಿದೆ. ಇದನ್ನು ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಬಿಇಒ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಧ್ವಜವನ್ನು ಅರ್ಧಕ್ಕೆ ಏರಿಸದೆ ಅಗೌರವ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.