ಪ್ರಜಾಸ್ತ್ರ ಸುದ್ದಿ
ಗುಜರಾತ್(Gujrat): ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ್ತಿ, ನಾಯಕಿ ಸ್ಮೃತಿ ಮಂದಾನ ವೇಗದ ಶತಕದ ದಾಖಲೆ ಮಾಡಿದ್ದಾರೆ. ಬುಧವಾರ ನಡೆದ ಐರ್ಲೆಂಡ್ ವಿರುದ್ಧದ ಏಕದಿನದ ಪಂದ್ಯದಲ್ಲಿ 70 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಹರ್ಮನ್ ಪ್ರೀತ್ ಕೌರ್ ದಾಖಲೆ ಮುರಿದರು. ರಾಜ್ ಕೋಟ್ ನಲ್ಲಿರುವ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ಸಾಧನೆಯನ್ನು ಸ್ಮೃತಿ ಮಂದಾನ ಮಾಡಿದರು.
ಹರ್ಮನ್ ಪ್ರೀತ್ ಕೌರ್ 87 ಎಸೆತಗಳಲ್ಲಿ ನೂರು ರನ್ ಗಳಿಸಿದ್ದರು. ಈ ದಾಖಲೆಯ ಜೊತೆಗೆ ಏಕದಿನದ ಪಂದ್ಯಗಳಲ್ಲಿ 10ನೇ ಶತಕ ದಾಖಲಿಸಿದರು. ಇನ್ನು ಆಸೀಸ್ ಆಟಗಾರ್ತಿ ಮೇಗ್ ಲ್ಯಾನಿಂಗ್ 15 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ನ್ಯೂಜಿಲೆಂಡ್ ನ ಬೇಟ್ಸ್ (13), 3ನೇ ಸ್ಥಾನವನ್ನು ಇಂಗ್ಲೆಂಡ್ ನ ಟ್ಯಾಮಿಯೊಂದಿಗೆ ಇದೀಗ ಸ್ಮೃತಿ ಮಂದನ ಹಂಚಿಕೊಂಡಿದ್ದಾರೆ.