ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಡಿ.ಬಿ ನಟೇಶ್ 50:50 ಅನುಮಾತದಲ್ಲಿ ನಿವೇಶನ ಹಂಚಿಕೆ ಮೂಲಕ ಗಳಿಸಿದ ಅಕ್ರಮ ಹಣವನ್ನು ಪತ್ನಿ ಹೆಸರಿನಲ್ಲಿ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಕೆಲ ನಾಯಕರು, ಅವರ ಕುಟುಂಬಸ್ಥರು ನಿರ್ದೇಶಕರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಈ ಸಂಬಂಧ ಡಿ.ಬಿ ನಟೇಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಪತ್ನಿ ರಶ್ಮಿ ಹೆಸರಿನಲ್ಲಿ ವಿವಿಧ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಬ್ಲೂಸ್ಟೋನ್, ವಿಪಾಸನ ಹೆಲ್ತ್ ಕೇರ್, ಅಕುನೋವ ಹೆಲ್ತ್ ಕೇರ್ ಎನ್ನುವ ಕಂಪನಿಗಳಲ್ಲಿ ರಶ್ನಿ ನಿರ್ದೇಶಕಿಯಾಗಿದ್ದಾರೆ. ಇಲವಾಲ ಹೋಬಳಿಯಲ್ಲಿ 2020ರಲ್ಲಿ ಬ್ಲೂಸ್ಟೋನ್ ಕಂಪನಿ 64.75 ಲಕ್ಷ ರೂಪಾಯಿಗೆ 1 ಎಕರೆ 30 ಗುಂಟೆ ಜಮೀನು ಖರೀದಿಸಿದೆ. ಅದೇ ಸಂಸ್ಥೆ 2022ರಲ್ಲಿ ನಗರದ ಬೋಗಾದಿಯಲ್ಲಿ 44.99 ಲಕ್ಷ ಮೌಲ್ಯದ ಫ್ಲ್ಯಾಟ್ ಖರೀದಿಸಿದೆ. ಡಿ.ಬಿ ನಟೇಶ್ ಅಕ್ರಮ ಆಸ್ತಿಯ ಮೂಲಕ ಹಣ ಹೂಡಿಕೆ ಮಾಡಿರುವ ಸಾಧ್ಯತೆಯಿದೆ. ಈ ಕಂಪನಿಗಳಲ್ಲಿ ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್ ಮಹಾದೇವಸ್ವಾಮಿ ಸೇರಿ ಹಲವು ಬಿಜೆಪಿ ನಾಯಕರು, ಅವರ ಕುಟುಂಬಸ್ಥರು ಈ ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದಾರೆ. ಇದರ ಬಗ್ಗೆ ತನಿಖೆಯಾಬೇಕು. ಈ ಬಗ್ಗೆ ಇಡಿಗೂ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.