ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ರಂಜಾನ್ ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿ ಹೆಸರಿನಲ್ಲಿ 32 ಲಕ್ಷ ಬಡ ಕುಟುಂಬಗಳಿಗೆ ಉಡುಗರೆ ನೀಡಲು ಬಿಜೆಪಿ ಸಜ್ಜಾಗಿದೆ. ಸೌಗತ್ ಎ ಮೋದಿ ಹೆಸರಿನ ಮೂಲಕ ದೇಶದ ತುಂಬಾ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಈದ್ ಗಿಫ್ಟ್ ನೀಡುತ್ತಿದೆ. ಬಿಜೆಪಿ ಅಲ್ಪ ಸಂಖ್ಯಾತ ಘಟಕದಿಂದ ಇದನ್ನು ಆಯೋಜಿಸಲಾಗಿದೆ. ಇದಕ್ಕಾಗಿ 32 ಸಾವಿರ ಮಸೀದಿಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ಬಿಜೆಪಿ ಘೋಷಿಸಿದೆ.
ಸೌಗತ್ ಎ ಮೋದಿ ಕಿಟ್ ನಲ್ಲಿ ರಂಜಾನ್ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಪ್ಯಾಕ್ ಮಾಡಲಾಗಿದೆ. ಖರ್ಜೂರ, ಒಣ ಹಣ್ಣುಗಳು, ತುಪ್ಪ, ಡಾಲ್ಡಾ, ಕಡಲೆ ಹಿಟ್ಟು, ವರ್ಮಿಸೆಲ್ಲಿ, ಮಹಿಳೆಯರಿಗೆ ಬಟ್ಟೆ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಇದರಲ್ಲಿ ನೀಡಲಾಗುತ್ತಿದೆ. ಮಾರ್ಚ್ 25 ಮಂಗಳವಾರದಿಂದಲೇ ಇದು ಶುರುವಾಗಿದೆ. ನವದೆಹಲಿಯ ಗಾಲಿಬ್ ಅಕಾಡಮಿಯಿಂದ ಚಾಲನೆ ಸಿಕ್ಕಿದೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ಬಿಜೆಪಿಯಿಂದ ಈದ್ ಕಿಟ್ ವಿತರಣೆ ನಡೆಯಲಿದೆ.