Ad imageAd image

ಎಸ್ಪಿ ಪವನ್ ನೆಜ್ಜೂರು ಆತ್ಮಹತ್ಯೆ ಯತ್ನ ಸುಳ್ಳು ವದಂತಿ

Nagesh Talawar
ಎಸ್ಪಿ ಪವನ್ ನೆಜ್ಜೂರು ಆತ್ಮಹತ್ಯೆ ಯತ್ನ ಸುಳ್ಳು ವದಂತಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ಬಳ್ಳಾರಿ ಘರ್ಷಣೆ ಪ್ರಕರಣದಲ್ಲಿ ಕರ್ತವ್ಯ ಲೋಪದಡಿಯಲ್ಲಿ ಅಧಿಕಾರ ವಹಿಸಿಕೊಂಡ ಒಂದು ದಿನದಲ್ಲಿಯೇ ಅಮಾನತುಗೊಂಡಿರುವ ಎಸ್ಪಿ ಪವನ್ ನೆಜ್ಜೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅನ್ನೋ ಸುದ್ದಿ ಹರಿದಾಡಿದೆ. ಅದು ಸುಳ್ಳು ವದಂತಿ ಅನ್ನೋದು ಪಕ್ಕಾ ಆಗಿದೆ.

ಕೆಲಸದಿಂದ ಅಮಾನತುಗೊಂಡಿರುವುದಕ್ಕೆ ಮನನೊಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರು ಹತ್ತಿರ ಸ್ನೇಹಿತರೊಬ್ಬರ ಫಾರ್ಮ್ ಹೌಸ್ ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅನ್ನೋ ಸುದ್ದಿ ಹರಿದಾಡಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಹ ಹೇಳಲಾಗಿತ್ತು. ಕೊನೆಗೂ ಇದು ಸುಳ್ಳು ವದಂತಿ. ಅವರು ಫಾರ್ಮ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article