ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaluru): ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಸುಲೈಮಾನ್ ಹಾಜಿ ಮನೆಯ ಮೇಲೆ ದಾಳಿ ಮಾಡಿ ಹಣ ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಸಭಾಧ್ಯಕ್ಷ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ. ಫೋನ್ ಮೂಲಕ ಹಾಜಿ ಅವರೊಂದಿಗೆ ಸಭಾಧ್ಯಕ್ಷರು ಮಾತನಾಡಿ ಧೈರ್ಯ ತುಂಬಿದ್ದಾರೆ. ಇದರ ಜೊತೆಗೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಆರೋಪಿಗಳ ಪತ್ತೆಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೋಳಂತೂರು ಹತ್ತಿರ ಉದ್ಯಮಿ ಸಿಂಗಾರಿ ಬಿಡಿ ಮಾಲೀಕ ಸುಲೈಮಾನ್ ಹಾಜಿ ಮನೆ ಇದೆ. ಇಲ್ಲಿಗೆ ತಮಿಳುನಾಡು ನೋಂದಣಿಯ ಇನೋವಾ ಕಾರಿನಲ್ಲಿ ಬಂದವರು ಇಡಿ ಅಧಿಕಾರಿಗಳೆಂದು ಹೇಳಿದ್ದಾರೆ. ಹಣ, ಮೊಬೈಲ್ ಸೇರಿದಂತೆ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ.