ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರದ ವಿಚಾರ ಗುರುವಾರ ಸದನದಲ್ಲಿ ತೀವ್ರ ಸೃಷ್ಟಿಸಿತು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಸಮರ ನಡೆಯಿತು. ಗೃಹ ಸಚಿವ ಪರಮೇಶ್ವರ್, ಶಾಸಕ ವಿಜಯಾನಂದ ಕಾಶಪ್ಪನರ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದರು. ಆರ್ ಎಸ್ಎಸ್ ನವರು ಕಲ್ಲು ಹೊಡೆದರು. ಚಡ್ಡಿಯವರು ಅಂತೆಲ್ಲ ಅಯೋಗ್ಯ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸ್ಪೀಕರ್ ವಿರುದ್ಧ ಬಿಜೆಪಿ ನಾಯಕರು ಅಸಮಾಧಾನ ಹೊರ ಹಾಕಿದರು. ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲವೆಂದು ಹೇಳಿದರು. ಹೀಗಾಗಿ ವಿಪಕ್ಷ ನಾಯಕರು ಏನ ಹೇಳುತ್ತಾರೋ ಅದರಂತೆ ನಡೆಯೋಣ ಎಂದು ಯತ್ನಾಳ ಹೇಳಿದರು. ಮುಂದೆ ಇದು ಗಲಾಟೆಗೆ ತಿರುಗಿತು. ಸ್ಪೀಕರ್ ಕಲಾಪ ಮುಂದೂಡಿದರು. ಆಗ ಬಿಜೆಪಿ ಸದಸ್ಯರು ಸ್ಪೀಕರ್ ಕಚೇರಿಗೆ ಮುತ್ತಿಗೆ ಹಾಕಿದರು. ಏಕಪಕ್ಷೀಯವಾಗಿ ಸ್ಪೀಕರ್ ನಡೆದುಕೊಳ್ಳುತ್ತಿದ್ದಾರೆ. ಸದನ ನಡೆಸಲು ಆಗಲ್ಲವೆಂದು ಕೂಗಾಟ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಹೀಗಾಗಿ ಗುರುವಾರ ಸದನ ಫುಲ್ ಗರಂ ಆಗಿತ್ತು.