ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೇಶದ ಸೂಕ್ಷ ವಿಚಾರಗಳನ್ನು ಪಾಕಿಸ್ತಾನಕ್ಕೆ ರವಾನಿಸುವ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಯುಟ್ಯೂಬರ್ ಜ್ಯೋತಿ ರಾಣಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಸುದ್ದಿ ಸಂಸ್ಥೆಯೊಂದು ಈ ಕುರಿತು ವರದಿ ಮಾಡಿದೆ. ಹರಿಯಾಣ ಮೂಲದ ಈಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಪಾಕ್ ಅಧಿಕಾರಿ ಅಹ್ಸಾನ್-ಉರ್-ರಹೀಮ್ ಭೇಟಿಯಾಗಿದ್ದಳಂತೆ. ಎರಡು ಬಾರಿ ಪಾಕಿಸ್ತಾನಕ್ಕೆ ಹೋಗಿ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡು ಬಂದಿದ್ದಾಳಂತೆ. ಈಕೆಯ ವಿರುದ್ಧ ವಿವಿಧ ಅಡಿಗಳಲ್ಲಿ ದೂರು ದಾಖಲಿಸಲಾಗಿದೆ. ಇನ್ನು ಭಾರತದ ಸೂಕ್ಷ್ಮ ವಿಚಾರಗಳ ಕುರಿತು ಈಕೆಗೆ ಮಾಹಿತಿ ನೀಡುತ್ತಿದ್ದವರು ಯಾರು ಅನ್ನೋ ಸಹಜ ಪ್ರಶ್ನೆ ಮೂಡಿದೆ.