Ad imageAd image

ಫೆ.15ರಿಂದ ಶ್ರೀ ಗುರು ಮಡಿವಾಳೇಶ್ವರ ಅಜ್ಜನ ಮಹಾ ರಥೋತ್ಸವ

Nagesh Talawar
ಫೆ.15ರಿಂದ ಶ್ರೀ ಗುರು ಮಡಿವಾಳೇಶ್ವರ ಅಜ್ಜನ ಮಹಾ ರಥೋತ್ಸವ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಧಾರವಾಡ(Dharwad): ತಾಲೂಕಿನ ಗರಗ ಗ್ರಾಮದ ಪವಾಡ ಪುರುಷ ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠದ 144ನೇ ಪುಣ್ಯಾರಾಧನೆ ಹಾಗೂ ಮಹಾ ರಥೋತ್ಸವಕ್ಕೆ‌ ಸಕಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಫೆಬ್ರವರಿ 15ರಂದು ಸಂಜೆ 5 ಗಂಟೆಗೆ ನಾಡಿನ ವಿವಿಧ ಮಠಾಧೀಶರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ರಥೋತ್ಸವದಲ್ಲಿ ಹೊಸೂರು ಶ್ರೀ ಗುರು ಮಡಿವಾಳೇಶ್ವರಮಠದ ಗಂಗಾಧರ ಮಹಾಸ್ವಾಮಿಗಳು, ಬೈಲಹೊಂಗಲ ಮೂರು ಸಾವಿರ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳು, ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು, ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರಮಠದ ಪಂಚಾಕ್ಷರಿ ಮಹಾಸ್ವಾಮಿ, ಯಕ್ಕುಂಡಿ ಪಂಚಾಕ್ಷರಿ ಮಹಾಸ್ವಾಮಿ, ಮಡಿವಾಳ ಮಹಾಸ್ವಾಮಿ, ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು, ನರೇಂದ್ರ ಶ್ರೀ ಮಳೆಪ್ಪಜ್ಜನ ಮಠದ ಸಂಗಮೇಶ್ವರ ಅಜ್ಜನವರು ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಫೆ.15 ರಂದು ನಡೆಯುವ ಪವಾಡ ಪುರುಷ ಶ್ರೀ ಗುರು ಮಡಿವಾಳೇಶ್ವರರ ಮಹಾ ರಥೋತ್ಸವದಲ್ಲಿ ಗರಗ, ಹಂಗರಕಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಶ್ರೀಮಠದ ಅಭಿವೃದ್ಧಿಗೆ ಮೊದಲಿನಿಂದಲೂ ತನು-ಮನ-ಧನದ ಮೂಲಕ ಸಹಕಾರ ನೀಡಿದ ಸರ್ವರಿಗೂ ಹೃದಯ ಪೂರ್ವಕ ಅಭಿನಂದನೆಗಳು. -ಅಮೃತ ದೇಸಾಯಿ, ಮಾಜಿ ಶಾಸಕರು ಹಾಗೂ ಶ್ರೀಮಠದ ಟ್ರಸ್ಟ್ ಕಮಿಟಿ ಕಾರ್ಯದರ್ಶಿ

ಶ್ರೀಮಠದಿಂದ ಆರಂಭವಾಗುವ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಲಿದೆ. ಈಗಾಗಲೇ ಶ್ರೀಮಠದಲ್ಲಿ ನಿತ್ಯ ಅಲಂಕಾರ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀಮಠದ ಟ್ರಸ್ಟ್‌ ಕಮಿಟಿಯ ಕಾರ್ಯಾಧ್ಯಕ್ಷರಾದ ಅಶೋಕ ದೇಸಾಯಿ, ಕಾರ್ಯದರ್ಶಿ ಅಮೃತ ಅಯ್ಯಪ್ಪ ದೇಸಾಯಿಯವರು ಹಾಗೂ ಗ್ರಾಮದ ಸದ್ಭಭಕ್ತರು ತನು-ಮನ-ಧನದಿಂದ ಮಠದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಶ್ರೀ ಗುರು ಮಡಿವಾಳೇಶ್ವರರ ಆಶಯದಂತೆ ಮುಜರಾಯಿ ಸೇರಿದಂತೆ ವಿವಿಧ ಅನುದಾನದಡಿ ಅಂದಾಜು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಗರಗ ಗ್ರಾಮದ ಶ್ರೀಮಠವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶ್ರೀಮಠದ ಮಹಾದ್ವಾರ, ಗುರು ಮಠ, 1500 ಜನ ಕುಳಿತುಕೊಳ್ಳುವಷ್ಟು ವಿಶಾಲವಾದ ಕಲ್ಯಾಣ ಮಂಟಪ, 12 ಯಾತ್ರಿ ನಿವಾಸ ಕೊಠಡಿಗಳು, ಶ್ರೀ ಗುರು ಮಡಿವಾಳೇಶ್ವರರ ಪವಾಡ ಬಾವಿ ಹಾಗೂ ನಿರಂತರ ಅನ್ನ ದಾಸೋಹ ಕೊಠಡಿ, ಮುಖ್ಯ ಕಚೇರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದ್ದು, ಇತ್ತೀಚೆಗೆ ಲೋಕಾರ್ಪಣೆಗೊಳಿಸಲಾಗಿದೆ. ಅಭಿವೃದ್ಧಿ ಕಾಮಗಾರಿ ಹಾಗೂ ಧಾರ್ಮಿಕ ಕಾರ್ಯಕ್ರಮದಿಂದಾಗಿ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿತ್ಯ ಸಾವಿರಾರು ಭಕ್ತರು ಆಗಮಿಸಿ, ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಳ್ಳುತ್ತಿದ್ದಾರೆ.  ಫೆಬ್ರವರಿ 15 ರಂದು ಸಂಜೆ ರಥೋತ್ಸವದಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಫೆ.19 ರಂದು ಬೆಳಿಗ್ಗೆ 11ಕ್ಕೆ ರಾಜ್ಯ ಮಟ್ಟದ ಖಾಲಿ ಗಾಡಾ (ಚಕ್ಕಡಿ) ಓಡಿಸುವ ಸ್ಪರ್ಧೆ ನಡೆಯಲಿದೆ ಎಂದು ಟ್ರಸ್ಟ್ ಕಮಿಟಿಯ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ ಹೇಳಿದ್ದಾರೆ.

 

WhatsApp Group Join Now
Telegram Group Join Now
Share This Article