ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಗೋಲಗೇರಿ ಪಟ್ಟಣದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ ಸಿ(SSLC Exam Cantera) ಪರೀಕ್ಷೆ ಕೇಂದ್ರವಾಗಬೇಕು ಎಂದು ಬಹುಜನ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀಶೈಲ ಜಾಲವಾದಿ ಆಗ್ರಹಿಸಿದ್ದಾರೆ. ಇವರ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ, ಇಲ್ಲಿನ ಪ್ರಸಿದ್ಧ ಗೊಲ್ಲಾಳೇಶ್ವರ ದೇವಸ್ಥಾನದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದೆ. ಸುತ್ತಲಿನ 30 ರಿಂದ 40 ಗ್ರಾಮಗಳ ವಿದ್ಯಾರ್ಥಿಗಳಿಗೆ ಗೋಲಗೇರಿ ವಿದ್ಯಾ ಕೇಂದ್ರವಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಅಕ್ಟೋಬರ್ 1ರಂದು ಪಟ್ಟಣ ಬಂದ್ ಮಾಡಿ ಹೋರಾಟ ಮಾಡಿದ್ದೇವೆ. ಗ್ರಾಮಾಂತರ ಪ್ರದೇಶದ ಬಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದಲ್ಲಿ ಸೂಕ್ತ ಶಾಲೆಯನ್ನು ಗುರುತಿಸಿ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರ ಮಂಜೂರು ಮಾಡಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಸಿಂದಗಿಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವು ಹತ್ತಿ, ಹಿರಿಯ ಹೋರಾಟಗಾರ ಎಚ್.ಎ ತಲ್ಲೊಳ್ಳಿ ಮಾತನಾಡಿದರು. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಸಲಾಗಿದೆ.
ಈ ವೇಳೆ ಉತ್ತರ ಕರ್ನಾಟಕ ಅಧ್ಯಕ್ಷ ರಾಜಶೇಖರ ಕುದುರಿ, ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ಪರಶುರಾಮ ಗರಸಂಗಿ, ಉತ್ತರ ಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ವಿಜಯಪುರ ಜಿಲ್ಲಾಧ್ಯಕ್ಷ ರಾಘವೇಂದ್ರ ಗುಡಿಮನಿ, ಜಿಲ್ಲಾ ಮಹಿಳಾಧ್ಯಕ್ಷೆ ಜಯಶ್ರೀ ಬ್ಯಾಕೋಡ, ದೇವರ ಹಿಪ್ಪರಗಿ ತಾಲೂಕಾಧ್ಯಕ್ಷ ಪ್ರಕಾಶ ತಳಕೇರಿ, ಜಿಲ್ಲಾ ಸಂಚಾಲಕ ಪ್ರದೀಪ ಮಲ್ಲಾರಿ, ಸಿಂದಗಿ ತಲೂಕು ಉಪಾಧ್ಯಕ್ಷ ಅರುಣ ಸಿಂಗೆ, ವಿದ್ಯಾರ್ಥಿ ಘಟಕ ಅಧ್ಯಕ್ಷ ಗೊಲ್ಲಾಳ ಬೈಚಬಾಳ, ಟಿಪ್ಪು ಸುಲ್ತಾನ ಮಹಾವೇದಿಕೆ ವಿಜಯಪುರ ಜಿಲ್ಲಾ ಯುವ ಘಟಕ ಅಧ್ಯಕ್ಷ ಮೋದಿನ ಶಾಬಾದಿ, ಬಹುಜನ ದ.ಸಂ.ಸ ಸಿಂದಗಿಯ ಅಲ್ಪ ಸಂಖ್ಯಾತರ ಘಟಕದ ಅಬುಬಕರ ಶಾಬಾದಿ, ತಾಲೂಕಾ ಉಪಾಧ್ಯಕ್ಷ ಸಲೀಮ ನಡುವಿನಮನಿ, ವಿಜಯ ಹೊಸಮನಿ, ಮಡಿವಾಳ ನಾಯ್ಕೋಡಿ, ಸಲೀಂ ಮುಲ್ಲಾ, ಲಕ್ಷ್ಮಣ ಕಲಾಲ, ನಜೀರ ಹುನಳ್ಳಿ, ಬಾಬು ಜಾಲವಾದಿ, ನೀಲಕಂಠ ಛಲವಾದಿ, ರಾಜು ಯಂಕಂಚಿ, ಮಲ್ಲಪ್ಪ ನಾಯಕೋಡಿ(ಬೆಂಗಳೂರು), ಸಿದ್ರಾಮ ಇಂಡಿ, ಗೊಲ್ಲಾಳ ತಳವಾರ ಸೇರಿದಂತೆ ಅನೇಕರು ಹಾಜರಿದ್ದರು.