ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ವಿಚಾರ ಸಂಬಂಧ ಸೆಪ್ಟೆಂಬರ್ 16ರಂದು ಮಧ್ಯಾಹ್ನ 3 ಗಂಟೆಗೆ ಕೊಠಡಿ ಸಂಖ್ಯೆ 331ರಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಎಸ್ಟಿ ಸೇರುವ ಸಂಬಂಧ ಕುರುಬ ಸಮುದಾಯದ ಬೇಡಿಕೆ ಇತ್ತು. ನಾವು ದಾಖಲೆ ಕೇಳಿದ್ದೇವು. ಹೀಗಾಗಿ ಮಂಗಳವಾರ ಸಭೆ ಕರೆಯಲಾಗಿದೆ. ಇದಾದ ಬಳಿಕ ಕೋಲಿ ಸಮುದಾಯದ ಸಭೆ ಕೂಡ ನಡೆಸಲಾಗುವುದು ಎಂದು ತಿಳಿಸಿದ್ದಾರೆ.