Ad imageAd image

ಬೆಂಗಳೂರು: ಮೇಲ್ವಿಚಾರಕ ಹತ್ಯೆ ಮಾಡಿದ ಸಿಬ್ಬಂದಿ

Nagesh Talawar
ಬೆಂಗಳೂರು: ಮೇಲ್ವಿಚಾರಕ ಹತ್ಯೆ ಮಾಡಿದ ಸಿಬ್ಬಂದಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೆಲಸಕ್ಕೆ ಸರಿಯಾಗಿ ಬರದೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಕನನ್ನು ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ವೆಲ್ಡರ್ ಇರಿದು ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮೃತನನ್ನು ರಾಹುಲ್(30) ಎಂದು ತಿಳಿದು ಬಂದಿದೆ. ಯಾದಗಿರಿ ಮೂಲದ ಹನಮಂತ ಅಲಿಯಾಸ್ ಅಜಯ್ ಕೊಲೆ ಆರೋಪಿಯಾಗಿದ್ದಾನೆ.

ಪೀಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಫರ್ನಿಚರ್ ಕಾರ್ಖಾನೆಯಲ್ಲಿ ಕಚ್ಚಾ ವಸ್ತುಗಳನ್ನು ಇಳಿಸುವ ಮೇಲ್ವಿಚಾರಕ ಕೆಲಸವನ್ನು ರಾಹುಲ್ ಮಾಡುತ್ತಿದ್ದ. ಆರೋಪಿ ಹನುಮಂತ, ಕಳೆದ 20 ದಿನಗಳಿಂದ ಕೆಲಸಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ರಾಹುಲ್ ಎಚ್ಚರಿಕೆ ಕೊಟ್ಟಿದ್ದ. ಇದರಿಂದ ಕೋಪಗೊಂಡ ಈತ ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ರಾಹುಲ್ ಸಹೋದರ ರೋಹಿತ್ ನೀಡಿದ ದೂರಿನ ಮೇರೆಗೆ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article