ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಮೈಸೂರು ರಾಜಮನೆತನದ ನಡುವೆ ಸಮರ ನಡೆಯುತ್ತಿದೆ. ಅದು ಕೋರ್ಟ್ ಮೆಟ್ಟಿಲು ಸಹ ಹತ್ತಿದೆ. ಈ ಬಗ್ಗೆ ರಾಜಮನೆತನದ ಪ್ರಮೋದಾದೇವಿ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಯದುವೀರ್ ಒಡೆಯರ ಸಹ ಚಾಮುಂಡಿ(Chamunddi Betta) ಬೆಟ್ಟ ನಮ್ಮ ಸಂಸ್ಥಾನಕ್ಕೆ ಸೇರಿದ್ದು ಎಂದಿದ್ದಾರೆ. ಇದರ ನಡುವೆ ಇಂದು ಸಿಎಂ ಸಿದ್ದರಾಮಯ್ಯನವರು ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಾಧಿಕಾರದ ಸಭೆಯನ್ನು ಕಾನೂನಾತ್ಮಕವಾಗಿ ಮಾಡುತ್ತಿದ್ದೇವೆ. ಕೋರ್ಟ್ ನಲ್ಲಿ ತಡೆಯಾಜ್ಞೆ ತೆರವಾಗಿದೆ. ಆದ್ದರಿಂದ ಇಂದು ಸಭೆ ನಡೆಸಲಾಗುತ್ತಿದೆ. ಯಾರದೋ ಹೇಳಿಕೆ ಆಧರಿಸಿ ಸಭೆ ಮುಂದೂಡಲು ಆಗುವುದಿಲ್ಲ. ಯದುವೀರ್(yaduveer wadiyar) ಮುಖ್ಯವೋ ಕಾನೂನು ಮುಖ್ಯವೋ ಎನ್ನುವ ಮೂಲಕ ರಾಜಮನೆತನದ ವಾದದ ವಿರುದ್ಧ ವಾಗ್ದಾಳಿ ನಡೆಸಿದರು.
ಏನಿದು ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರ?
ಚಾಮುಂಡಶ್ವರಿ ದೇವಸ್ಥಾನ ಸೇರಿದಂತೆ ಸುತ್ತಿನ ಪ್ರದೇಶ, ದೇವಸ್ಥಾನಗಳನ್ನು ಅಭಿವೃದ್ಧಿ ಹಾಗೂ ನಿರ್ವಹಣೆಯ ನೆಪದಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದೆ. ಚಾಮುಂಡಿ ಬೆಟ್ಟದ ಮೇಲಿನ ದೇವಸ್ಥಾನ ಹಾಗೂ ಇತರೆ ದೇವಾಲಯಗಳು ನಮ್ಮ ಕುಟುಂಬದ ಆಸ್ತಿಗಳು. 1971ರಲ್ಲಿ ಸಂವಿಧಾನಕ್ಕೆ ನಡೆದ 26ನೇ ತಿದ್ದುಪಡಿಲ್ಲಿ ರಾಜಮನೆತನಗಳ ಆಸ್ತಿಗಳ ವಿವರ ಸಲ್ಲಿಸಲು ಅಂದಿನ ಕೇಂದ್ರ ಸರ್ಕಾರ ಕೇಳಿತ್ತು. ಆಗ ಚಾಮುಂಡಿ ಬೆಟ್ಟದಲ್ಲಿನ ದೇವಸ್ಥಾನವೂ ಸೇರಿದಂತೆ ಹಲವಾರು ಆಸ್ತಿಗಳ ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ 1972ರಲ್ಲಿ ಅನುಮೋದಿಸಿ, ಇದು ಸರ್ಕಾರಿ ಆಸ್ತಿ ಅಲ್ಲವೆಂದು ಸಹಿ ಹಾಕಿದ್ದಾರೆ ಎಂದು ಪ್ರಮೋದಾದೇವಿಯವರ(pramoda devi wadiyar) ಮಾತು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಿ ಕಾಯ್ದೆ-2024 ಅನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆ ಮೂಲಕ ಕ್ಷೇತ್ರದ ಅಭಿವೃದ್ಧಿ, ನಿರ್ವಹಣೆ ಸರ್ಕಾರ ನೋಡಿಕೊಳ್ಳುತ್ತೆ ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿ ಸ್ಥಳೀಯ ಶಾಸಕರು, ಸಂಸದರು, ಅಧಿಕಾರಿಗಳು ಇರುತ್ತಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹೆಚ್ಚಿನ ಹಣ ಸಂಗ್ರಹವಾಗುತ್ತದೆ. ಸರ್ಕಾರದ ಬಳಿ ಅಧಿಕಾರವಿದ್ದರೆ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸಿ, ಅಭಿವೃದ್ಧಿ ಪಡೆಸಲು ಅನುಕೂಲವಾಗುತ್ತೆ. ಹೀಗಾಗಿ ಕಳೆದ ಫೆಬ್ರುವರಿಯಲ್ಲಿ ರಾಜ್ಯ ಸರ್ಕಾರ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ-2024 ಅನ್ನು ಅಂಗೀಕರಿಸಿದೆ.
ಸಾವಿರ ವರ್ಷಗಳ ಇತಿಹಾಸದ ದೇವಸ್ಥಾನ
ಮೈಸೂರಿನಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿ ಚಾಮುಂಡಿ ಬೆಟ್ಟವಿದೆ. ಇಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. 1399ರಲ್ಲಿ ಮೈಸೂರು ಮಹಾರಾಜರು, ಒಡೆಯರ ಅವರು ಅಧಿಕಾರಕ್ಕೆ ಬಂದ ನಂತರ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರತಿ ವರ್ಷ ವಿಜಯ ದಶಮಿಯ ಸಂದರ್ಭದಲ್ಲಿ ಮೈಸೂರು(Mysore Dasara) ದಸರಾ ಹಬ್ಬ ಆಚರಿಸಲಾಗುತ್ತೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜರು ಅಂಬಾರಿಯಲ್ಲಿ ಕುಳಿತು ಜಂಬೂ ಸವಾರಿ ನಡೆಯುತಿತ್ತು. ಸ್ವಾತಂತ್ರ್ಯ ಬಂದ ಬಳಿಕ ಪ್ರಜಾಪ್ರಭುತ್ವ ಶುರುವಾಯ್ತು. ಹೀಗಾಗಿ ರಾಜರ ಬದಲು ಚಾಮುಂಡೇಶ್ವರಿದೇವಿಯ ಭವ್ಯ ಮೆರವಣಿಗೆ ನಡೆಯುತ್ತೆ.