ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ಸಿಂದಗಿ ಪಟ್ಟಣದ ಜ್ಞಾನಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೇಮಾ.ಎನ್ ನಾಯ್ಕ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋರವಾರ ಶಾಖೆಯಿಂದ ಏಪ್ರಿಲ್ 26ರಂದು ಆಯೋಜಿಸಲಾಗಿದೆ. ಅಂದು ಶಿಕ್ಷಕಿ ಪ್ರೇಮಾ.ಎನ್ ನಾಯ್ಕ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.
ಕಳೆದ ಸುಮಾರು ಎರಡು ದಶಕಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ರೂಪಿಸುವಲ್ಲಿ ಶಿಕ್ಷಕಿ ಪ್ರೇಮಾ.ಎನ್ ನಾಯ್ಕ ಅವರ ಪಾತ್ರ ದೊಡ್ಡದಿದೆ. ಇದನ್ನು ಗುರುತಿಸಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಒಲಿದು ಬಂದಿದೆ. ಹೀಗಾಗಿ ಶಾಲೆಯ ಸಹದ್ಯೋಗಿಗಳು, ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಹಿತೈಷಿಗಳು ಶುಭ ಕೋರಿದ್ದಾರೆ. ಇನ್ನಷ್ಟು ಪ್ರಶಸ್ತಿಗಳು ಇವರ ಮುಡಿಗೇರಲಿ ಎಂದು ಹಾರೈಸಿದ್ದಾರೆ.