ಜ.4ರಂದು ಸಿಂದಗಿಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ

Nagesh Talawar
ಜ.4ರಂದು ಸಿಂದಗಿಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಡಾ.ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ), ಧಾರವಾಡ ಹಾಗೂ ಕಲಬುರ್ಗಿ ಫೌಂಡೇಶನ್, ವಿಜಯಪುರ ಸಂಯುಕ್ತಾಶ್ರಯದಲ್ಲಿ ಜನವರಿ 4ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಮಾಂಗಲ್ಯ ಭವನದಲ್ಲಿ ಮುಂಜಾನೆ 10.30ಕ್ಕೆ ಡಾ.ಎಂ.ಎಂ ಕಲಬುರ್ಗಿಯವರ ಸೃಜನ ಸಾಹಿತ್ಯ ಕುರಿತು ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ನ್ಯೂಜಿಲೆಂಡ್ ನ ಆಕ್ಲಂಡ್ ನಲ್ಲಿರುವ ಬಸವ ಸಮಿತಿ ಸಂಸ್ಥಾಪಕರಾದ ಡಾ.ಲಿಂಗಣ್ಣ ಕಲಬುರ್ಗಿ ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು. ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿಕೊಳ್ಳುವವರು. ವಿಚಾರ ಸಂಕಿರಣದಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರ ‘ಕೆಟ್ಟಿತ್ತು ಕಲ್ಯಾಣ’ ನಾಟಕ ಕುರಿತು ಡಾ.ಎಂ.ಎಸ್.ಮಾಗಣಗೇರಿ, ‘ನೀರು ನೀರಡಿಸಿತ್ತು’ ಮತ್ತು ‘ನೀರಾಗ ನಿಂತೀನಿ ನೀರಡಿಸಿ’ ಕವನ ಸಂಕಲನದ ಕುರಿತು ಮನು ಪತ್ತಾರ ಕಲಕೇರಿ ಪ್ರಬಂಧ ಮಂಡಿಸುವರು.

ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಮಾಡುವರು. ಇದೇ ವೇಳೆ ಎಂ.ಎಂ.ಕಲಬುರ್ಗಿಯವರ ಕುರಿತು ರಚನೆಯಾದ ‘ರಕ್ತ ವಿಲಾಸ’ ನಾಟಕ ಪ್ರದರ್ಶನ ಮಾಡಲಾಗುವುದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article