ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಷೇರುಮಾರುಕಟ್ಟೆ ವಾರದ ಶುರುವಾನಲ್ಲೇ ಭಾರಿ ಕುಸಿತ ಕಂಡಿದೆ. ಇದರಿಂದಾಗಿ ಭಾರತೀಯ ಷೇರು(share market) ಮಾರುಕಟ್ಟೆಯಲ್ಲಿ ಕೋಟಿ ಕೋಟಿ ನಷ್ಟವಾಗಿದೆ. ಮುಂಜಾನೆ 9.30ರ ಸುಮಾರಿಗೆ ಸೆನ್ಸೆಕ್ಸ್ 1533.11 ಅಂಕಗಳೊಂದಿಗೆ ಕುಸಿತ ಕಂಡಿದೆ. ಎನ್ಎಸ್ ನಿಫ್ಟಿ(nifty) 463.50 ಪಾಯಿಂಟ್ ಗಳ ಕುಸಿತದೊಂದಿಗೆ 24,254.20 ಪಾಯಿಂಟ್ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕಡಿಮೆಯಾಗಿದೆ. ಹೀಗಾಗಿ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ.
ಅಮೆರಿಕದ ಆರ್ಥಿಕ ಹಿಂಜರಿತದ ಪರಿಣಾಮ ಜಪಾನ್, ಇಸ್ರೇಲ್, ಹಾಂಗ್ ಕಾಂಗ್ ಸೇರಿ ಜಾಗತಿಕ ಮಟ್ಟದಲ್ಲಿ ನಿಫ್ಟಿ ಭಾರಿ ಇಳಿಕೆ ಕಂಡಿದೆ. ಹೀಗಾಗಿ ಹೂಡಿಕೆದಾರರು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಐಟಿ, ರಿಯಾಲಿಟಿ, ಬ್ಯಾಂಕ್ ಹಾಗೂ ಹಣಕಾಸು ಸೇವೆಗಳ ಷೇರು ಕುಸಿತ ಕಂಡಿದೆ. ಟಾಟಾ ಮೋಟರ್ಸ್, ಜೆಎಸ್ ಡಬ್ಲು ಸ್ಲೀಟ್, ಶ್ರೀರಾಮ್ ಫೈನಾನ್ಸ್, ಹಿಂಡಲ್ಕೋ, ಮಾರುತಿ, ಅದಾನಿ ಪೋರ್ಟ್, ರಿಲಯನ್ಸ್, ಟಾಟಾ ಸ್ಟೀಲ್, ಒಎನ್ ಜಿಸಿ ಷೇರುಗಳು ನಷ್ಟದಲ್ಲಿ ತೋರಿಸುತ್ತಿವೆ.