ಬಸವ ಪಾಟೀಲ ಕೊಂಡಗೂಳಿ, ಲಂಡನ್
ನನಗ ಇತಿಹಾಸ ಪಾಠ ಮಾಡು ಮಾಸ್ತರು ಯಣ್ಣ ನಿನಗ ಬಿಡುವು ಇದ್ದಾಗ ಈ ಪುಸ್ತಕ ಓದು ಅಂತ ಹಣಮಗೌಡರ ಈ ಪುಸ್ತಕ ಪಿಡಿಎಫ್ ಕಳಿಸಿದರು. ನಾ ಮೂರು ದಿನ ತಗೊಂಡ್ಯಾ ಓದಲಕ್ಕ! ರೆಹಮಾನವ್ವ ಕಲ್ಮನಿಯವರ ಜೀವನ ದಂತ ಕಥೆಯಲ್ಲ ಬದುಕು! ಆ ಬದುಕಿನಲ್ಲಿ 11 ಮಕ್ಕಳನ್ನ ಹೆತ್ತು ಬಾಬಣ್ಣ ಬದುಕಿನ ಕಥೆ/ ಬದಕನ್ನ ನಿರೂಪಿಸುದ ಬಹತೇಕ ಬಾಬಣ್ಣನ ಹೆಂಡತಿ ಮೇಹಬೂಬಿ ಮಹಾದೇವಿಯಾಗಿದ್ದು. ರೆಹಮೇನಾಬಿ, ರೆಹಮಾನ ಜಾನ್ ಆಗಿ ರೆಹಮಾನವ್ವ ಕಲ್ಮನಿಯಾಗಿದ್ದು ಬದುಕಲ್ಲ ನಮ್ಮ ಇತಿಹಾಸ ಜೀವಂತಗೊಳಿಸಿದ ಜೀವ.
ಕಿತ್ತೂರ ರಾಣಿ ಚೆನ್ನಮ್ಮನ ಮತ್ತ ಹೇಮರಡ್ಡಿ ಮಲ್ಲಮ್ಮನ ಸಚಿತ್ರಗೊಳಿಸಿದವರು ರೆಹಮಾನವ್ವ ಕಲ್ಮನಿ, ಅಂಗ್ರೇಜಿ ಮೊಗಲಾಯಿ ಸಂಸ್ಕೃತಿಯೊಳಗ ವಮಗ ಎಚ್ಚರಿಸಿದ ತಾಯಿ-ಮಕ್ಕಳಿಗಿ ಮಂಜುಳಾ, ಲಲಿತಾ, ಮುನ್ನಾ ಬಾಬಣ್ಣ ಅಂತ ಹೆಸರಿಟ್ಟು, ಪಾತ್ರ ನಿಭಾಯಿಸಿ ಗ್ರೀನ್ ರೂಮಲ್ಲಿ ಬಾಣೆತಾನ ಮಾಡಕೊಂಡಾಕೆ. ಯವ್ವಾ ನಿನ್ನ ಕಲಾರಂಗದ ಸೇವೆಗೆ ಶರಣು ನಾವು ಪಾತ್ರದವರೆವ್ವ!
ನಿನ್ನ ಬದುಕು ಮಾಹಕಾವ್ಯ. ಅದನ್ನ ನಿಭಾಯಿಸಿ ಲಂಡನ್ ಊರೊಳಗ ಮಕ್ಕೊಬೇಕಂದರ ಮೂರು ದಿನ ನೀ ನೆನಪಾದಿ. ನಿನ್ನ ಕಾಯಕ ನಟನೆ-ಅದಕ್ಕ ಜೀಂವ ತುಂಬದಿ. ಚೆನ್ನಮ್ಮ ಮತ್ತು ಮಲ್ಲಮ್ಮನ ಜೀವಂತಗೊಳಸಿದಿ. ನಿಮಗೆ ಶರಣು ಶರಣಾರ್ಥಿ ಯವ್ವಾ.




