ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನಿಗಮಗಳಿಂದ ಕರೆ ನೀಡಲಾಗಿತ್ತು. ಇದಕ್ಕೆ ಹೈಕೋರ್ಟ್ ಗರಂ ಆಗಿ ವಾರೆಂಟ್ ರಹಿತ ಬಂಧನದ ಎಚ್ಚರಿಕೆ ನೀಡಿತು. ಅಲ್ಲದೇ ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. ಹೀಗಾಗಿ ಸಧ್ಯಕ್ಕೆ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದ್ದು, ಬಸ್ ಗಳು ಸಂಚಾರ ಶುರುವಾಗಿದೆ. ಸಾರ್ವಜನಿಕರ ತಮ್ಮ ತಮ್ಮ ಸ್ಥಳಗಳಿಗೆ ತೆರಳುತ್ತಿದ್ದಾರೆ.
ನಾಲ್ಕು ಘಟಕಗಳಿಂದ 26 ಸಾವಿರಕ್ಕೂ ಹೆಚ್ಚು ಬಸ್ ಗಳು ಸಂಚರಿಸುತ್ತವೆ. 1 ಲಕ್ಷಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿರುವಾಗ ಹೈಕೋರ್ಟ್ ಸೂಚನೆಯ ನಡುವೆಯೂ ಮಂಗಳವಾರ ಬಹುತೇಕ ಬಸ್ ಗಳು ಸಂಚರಿಸಿರಲಿಲ್ಲ. ಹೀಗಾಗಿ ಕೆಲಸಕ್ಕೆ ಬರದೆ ಇರುವವರು ಮೇಲೆ ಎಸ್ಮಾ ಯಾಕೆ ಜಾರಿ ಮಾಡಬಾರದು ಎಂದು ಕೋರ್ಟ್ ಪ್ರಶ್ನಿಸಿತು. ಹೀಗಾಗಿ ಇಂದು ಬಸ್ ಸಂಚಾರ ಶುರುವಾಗಿದೆ.