ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಕಬ್ಬು ಕಟಾವುದಾರರ ಹಾಗೂ ಸಾಗಾಣಿಕೆದಾರರ ಬಾಕಿ ಹಣವನ್ನು ನೀಡದಿದ್ದರೆ, ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಶಿವಕುಮಾರ ಬಿರಾದಾರ ಹೇಳಿದ್ದಾರೆ. ಮಲಘಾಣದಲ್ಲಿರುವ ಶ್ರೀ ಸಾಯಿ ಬಸವ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು.
ಟನ್ ಗೆ 114ರಂತೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಎರಡು ದಿನಗಳಲ್ಲಿ ರೈತರಿಗೆ ನೀಡಬೇಕು. ಇಲ್ಲದೆ ಹೋದರೆ ಕಬ್ಬು ಕಟಾವುದಾರರು, ಸಾಗಾಣಿಕೆದಾರರು, ರೈತಪರ ಸಂಘಟನೆಗಳ ಪದಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಸಿಂದಗಿ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ, ಆಲಮೇಲ ತಾಲೂಕಾಧ್ಯಕ್ಷ ಮಹಮ್ಮದ್ ಉಸ್ತಾದ್ ಸೇರಿ ಇತರರು ಉಪಸ್ಥಿತರಿದ್ದರು.