ಪ್ರಜಾಸ್ತ್ರ ಸುದ್ದಿ
ಬೆಳ್ತಂಗಡಿ(Beltangadi): ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಕಳಿಸಿ ಕಿರುಕುಳ ನೀಡುತ್ತಿದ್ದ ಕಾಲೇಜು ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ನಡೆದಿದೆ. ಕಾಲೇಜುವೊಂದರ ವಿದ್ಯಾರ್ಥಿ ಸೈಯದ್ ಬಂಧಿತ ಆರೋಪಿಯಾಗಿದ್ದಾನೆ. ಇತನ ಮೊಬೈಲ್ ನಲ್ಲಿ ಹಲವು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಲವು ವಿದ್ಯಾರ್ಥಿನಿಯರ ಜೊತೆಗಿನ ವಿಡಿಯೋಗಳು ಮೊಬೈಲ್ ನಲ್ಲಿ ಲಭ್ಯವಾಗಿವೆ.
ಕಾರ್ಕಳ ನಿವಾಸಿಯಾಗಿರುವ ಸೈಯದ್ ಕಬ್ಬಡಿ ಆಟಗಾರನಾಗಿದ್ದಾನೆ. ಅಶ್ಲೀಲ ಮೆಸೇಜ್ ಕಳಿಸಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣ ಇತನ ಮೇಲೆ ದಾಖಲಾಗಿದೆ. ಹಿಂದುಪರ ಸಂಘಟನೆ ಕಾರ್ಯಕರ್ತರ ಇವನ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದು ಬಂದಿದೆ.