ಪ್ರಜಾಸ್ತ್ರ ಸುದ್ದಿ
ಕೋಲ್ಕತ್ತಾ(kolkata): ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಹಿಂಸೆಗೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ(mamata banerjee) ಹತ್ಯೆಗೆ ಪ್ರಚೋದನೆ ನೀಡಿದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಕೀರ್ತಿ ಸೋಷಿಯಲ್ ಹ್ಯಾಂಡಲ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಬಿ.ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿ ಕೀರ್ತಿ ಶರ್ಮಾ ಎಂಬಾತನನ್ನು ಬಂಧಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ(indira gandhi) ಗಾಂಧಿಯವರಂತೆ ಹತ್ಯೆ ಮಾಡಬೇಕು ಎಂದು ಪೋಸ್ಟ್ ಮಾಡಿದ್ದ.
ಇನ್ಸ್ ಟಾಗ್ರಾಂನಲ್ಲಿ 3 ಐಡಿಗಳನ್ನು ಹೊಂದಿದ್ದ. ಅದರಲ್ಲಿ ಕಥೆಗಳನ್ನು ಅಪ್ ಲೋಡ್ ಮಾಡಿದ್ದ. ಸಿಎಂ ವಿರುದ್ಧ ಪ್ರಚೋದನಕಾರಿ ಕಥೆಗಳು, ಹತ್ಯೆಯ ಬೆದರಿಕೆ ಹಾಕುವ ಸ್ಟೋರಿಗಳನ್ನು ಹಂಚಿಕೊಂಡಿದ್ದ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ರೀತಿಯಲ್ಲಿ ಪೋಸ್ಟ್ ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೀರ್ತಿ ಶರ್ಮಾ ಎಂಬಾತನ ಬಂಧನವಾಗಿದೆ.