ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಶಾಲೆಯಲ್ಲಿನ ಶಿಕ್ಷಕರ ಕಿರುಕುಳಕ್ಕೆ 10ನೇ ತರಗತಿ ವಿದ್ಯಾರ್ಥಿಯೊಬ್ಬ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನವದೆಹಲಿಯಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನ 2.45ರ ಸುಮಾರಿಗೆ ಈ ಘಟನೆ ನಡೆದಿದ್ದು, ದೆಹಲಿಯ ಕೇಂದ್ರ ಭಾಗದಲ್ಲಿರುವ ರಾಜೇಂದ್ರ ಮೆಟ್ರೋ ನಿಲ್ದಾಣ ಹತ್ತಿರ. ಬಾಲಕನ ತಂದೆಗೆ ಫೋನ್ ಬಂದಿದೆ. ಮಗ ತೀವ್ರ ಗಾಯಗೊಂಡಿದ್ದಾನೆ ಎಂದು. ಆಗ ಅವರು ಬಿ.ಎಲ್ ಕಪೂರ್ ಆಸ್ಪತ್ರೆಗೆ ಕರೆದುಕೊಂಡು ಬರಲು ಹೇಳಿದ್ದಾರೆ. ಕುಟುಂಬಸ್ಥರೊಂದಿಗೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ ಬರೆದಿರುವ ಡೆತ್ ನೋಟ್ ನೋಡಿದರೆ ಎಲ್ಲರ ಹೃದಯ ಹಿಂಡುತ್ತೆ. ಕ್ಷಮಿಸು ಅಮ್ಮ, ಎಷ್ಟೋ ಸಾರಿ ನಿಮಗೆ ಬೇಸರ ಮಾಡಿದ್ದೇನೆ. ಇದು ಕೊನೆಯ ಬಾರಿ. ಶಾಲೆಯಲ್ಲಿ ಶಿಕ್ಷಕರು ಇರುವುದೆ ಹಾಗೆ. ಅವರ ಕುರಿತು ಏನು ಹೇಳಲಿ. ನಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ಕ್ಷಮೆ ಕೇಳುತ್ತೇನೆ. ಶಾಲೆಯಲ್ಲಿ ಏನು ನಡೆದಿದೆಯೋ ಅದನ್ನು ಎದುರಿಸಲು ಇದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಅಣ್ಣನಿಗೂ ಎಷ್ಟೋ ಬಾರಿ ನೋವಾಗುವಂತೆ ಮಾತನಾಡಿದ್ದೇನೆ. ನನ್ನ ಅಂಗಾಗಳು ಚೆನ್ನಾಗಿದ್ದರೆ ಅವಶ್ಯಕತೆ ಇರುವವರಿಗೆ ದಾನ ಮಾಡಿ. ಒಳ್ಳಯ ಮನುಷ್ಯನಾಗಲು ಸಾಧ್ಯವಾಗದ್ದಕ್ಕೆ ತಂದೆಗೆ, ಸದಾ ಬೆಂಬಲ ನೀಡಿದ ತಾಯಿಗೆ ಧನ್ಯವಾದಗಳು ಎಂದಿದ್ದಾನೆ.
ಶಾಲೆಯ ಮುಖ್ಯ ಶಿಕ್ಷಕ, ಮೂವರು ಶಿಕ್ಷಕರ ವಿರುದ್ಧ ಬಾಲಕ ತಂದೆ ದೂರು ನೀಡಿದ್ದಾನೆ. ಶಿಕ್ಷಕರು ಕಳೆದ ಕೆಲವು ದಿನಗಳಿಂದ ಬೆದರಿಕೆ ಹಾಕುತ್ತಿದ್ದರು. ವರ್ಗಾವಣೆ ಪತ್ರ ಕೊಟ್ಟು ಕಳಿಸುತ್ತೇವೆ ಎನ್ನುತ್ತಿದ್ದರು ಎಂದು ಮಗನ ಸ್ನೇಹಿತರು ಹೇಳಿದ್ದಾರೆ ಎಂದು ತಂದೆ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ನೋಡದಾಗಿದೆ.




