Ad imageAd image

ಹುಟ್ಟು ಹಬ್ಬದ ದಿನವೇ ಅಪಘಾತದಲ್ಲಿ ವಿದ್ಯಾರ್ಥಿ ಸಾವು

Nagesh Talawar
ಹುಟ್ಟು ಹಬ್ಬದ ದಿನವೇ ಅಪಘಾತದಲ್ಲಿ ವಿದ್ಯಾರ್ಥಿ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹಿರಿಯೂರು(Hiriyoru): ಆಟೋ ಹಾಗೂ ಬೈಕ್ ಅಪಘಾತದಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಗುರುವಾರ ತಾಲೂಕಿನ ಮುಂಗಸವಳ್ಳಿ ಹತ್ತಿರ ನಡೆದಿದೆ. ಚಿದಾನಂದ(22) ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇಂದು ಆತನ ಹುಟ್ಟು ಹಬ್ಬವಿದ್ದು, ಅದರ ಸಂಭ್ರಮದಲ್ಲಿದ್ದವನ ಬದುಕಿನಲ್ಲಿ ದುರಂತ ನಡೆದೆ ಹೋಗಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹರಿಯಬ್ಬೆ ಗ್ರಾಮದಿಂದ ಊರಿಗೆ ಹೊರಟಿದ್ದ. ಇದೇ ಗ್ರಾಮ ಪಂಚಾಯ್ತಿಯ ಕಸದ ಆಟೋ ಹಾಗೂ ವಿದ್ಯಾರ್ಥಿ ಬೈಕ್ ನಡುವೆ ಅಪಘಾತವಾಗಿದೆ. ಗಾಯಗೊಂಡ ಚಿದಾನಂದನನ್ನು ಧರ್ಮಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article