Ad imageAd image

ಸಿಂದಗಿ: ಆಶಾ ಕಾರ್ಯಕರ್ತೆಯರ ಯಶಸ್ವಿ ಸಮ್ಮೇಳನ

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನವನ್ನು ತಾಲ್ಲೂಕು ವೈದ್ಯಾಧಿಕಾರಿ ಎ.ಎಮ್ ಮಾಗಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ

Nagesh Talawar
ಸಿಂದಗಿ: ಆಶಾ ಕಾರ್ಯಕರ್ತೆಯರ ಯಶಸ್ವಿ ಸಮ್ಮೇಳನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಆಶಾ ಕಾರ್ಯಕರ್ತೆಯರ(asha worker) ತಾಲೂಕು ಸಮ್ಮೇಳನವನ್ನು ತಾಲ್ಲೂಕು ವೈದ್ಯಾಧಿಕಾರಿ ಎ.ಎಮ್ ಮಾಗಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಬೇಕಿದೆ. ನಮ್ಮ ಆಶಾ ಕಾರ್ಯಕರ್ತೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು‌. ನಿಮ್ಮ ಬೇಡಿಕೆಗಳು ಈಡೇರಲಿ ಮತ್ತು ನಿಮ್ಮ ಸೇವೆ ಇನ್ನಷ್ಟು ಉತ್ತಮವಾಗಿ ಜನರಿಗೆ ತಲುಪಲು ಸಹಕಾರಿಯಾಗಲಿ ಎಂದರು.

ಎಐಯುಟಿಯುಸಿಯ(AIUTUC) ಜಿಲ್ಲಾಧ್ಯಕ್ಷ ಹೆಚ್.ಟಿ ಮಲ್ಲಿಕಾರ್ಜುನ ಮಾತನಾಡಿ, ಆಶಾ ಕಾರ್ಯಕರ್ತೆಯರು ಪಿ.ಎಚ್.ಸಿಯ ಆಧಾರ ಸ್ಥಂಭವಾಗದೆ ಅವರು ಇಡೀ ರಾಜ್ಯದ ಆರೋಗ್ಯ ಇಲಾಖೆಯ ಆಧಾರ ಸ್ತಂಭವಾಗಿದ್ದಾರೆ. ಕೋವಿಡ್ ವೇಳೆ ತಮ್ಮ ಪ್ರಾಣ ಒತ್ತೆಯಿಟ್ಟು ಸೇವೆ ಸಲ್ಲಿಸಿದ್ದಾರೆ. ಇವರು ಬಂದ ಮೇಲೆ ಸಮಾಜದಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಸಾವು ಗಣನೀಯ ಇಳಿಕೆ ಕಂಡು ಬಂದಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ ಅಂತಾ ತಿಳಿಸಿದರು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆಶಾ ಕಾರ್ಯಕರ್ತೆಯರ ಹಿತ ಕಾಪಾಡುತ್ತಿಲ್ಲ. ಇದಕ್ಕೆ ಉಳಿದಿರುವುದು ಹೋರಾಟವೊಂದೆ ದಾರಿ ಎಂದರು.

ಆಶಾ ಸಂಘಟನೆಯ ಜಿಲ್ಲಾ ಮುಖಂಡರಾದ ಹೆಚ್.ಟಿ ಭರತಕುಮಾರ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷತೆಯನ್ನು ತಾಲೂಕಾಧ್ಯಕ್ಷೆ ರೇಣುಕಾ ಕಲಕುಟಗೇರ ವಹಿಸಿದ್ದರು. ಸಮ್ಮೇಳನದ ಆರಂಭದಲ್ಲಿ ಎಐಯುಟಿಯುಸಿಯ ಸಂಸ್ಥಾಪನಾ‌ ಅಧ್ಯಕ್ಷರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮ್ಮೇಳನದ ಕೊನೆಯಲ್ಲಿ ನೂತನ ತಾಲೂಕು ಸಮಿತಿಯ ರಚನೆಯಾಯಿತು. ಅಧ್ಯಕ್ಷರಾಗಿ ಜ್ಯೋತಿ ಶಾಬಾದಿ, ಉಪಾದ್ಯಕ್ಷರಾಗಿ ಮಹಾನಂದ, ನಾಗಮ್ಮ, ಜಗದೇವಿ, ರೇಣುಕಾ‌ ಹೊಸಮನಿ, ಯಮನವ್ವ ಕಾರ್ಯದರ್ಶಿಯಾಗಿ ಮೈರುನ್ನಿಸಾ ಜಂಟಿ ಕಾರ್ಯಕರ್ಶಿಯಾಗಿ, ರೂಪಾ ಅಲಮೇಲ, ಅಂಬುಬಾಯಿ, ಅನಸುಬಾಯಿ, ರೇಣುಕಾ ಕನ್ನೊಳ್ಳಿ ಹಾಗು ಸಮಿತಿಯ ಸದಸ್ಯರುಗಳಾಗಿ ತುಳಸಿ, ಕವಿತಾ, ಲಕ್ಮೀ, ವಿಜಯಲಕ್ಷ್ಮೀ, ಮಹಾದೇವಿ, ಸರಸ್ವತಿ‌, ಕನ್ಯಾಕುಮಾರಿ, ಫಾತಿಮಾ ಶೆಖ್, ಶೋಭಾ, ಬಸಮ್ಮ, ಸುನಂದ, ಬೋರಮ್ಮ, ರೇಣುಕಾ, ಭಾರತಿ, ನಾಗರತ್ನ, ಮಲ್ಲಮ್ಮ, ಶಂಕ್ರಮ್ಮ ಆಯ್ಕೆಯಾದರು.

WhatsApp Group Join Now
Telegram Group Join Now
Share This Article