ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬುಧುವಾರ ಎಲ್ಲೆಡೆ ರಿಲೀಸ್ ಆಗಿದೆ. ಅಭಿಮಾನಿಗಳು ತುಂಬಾ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗಿತಿಸಿದ್ದಾರೆ. ಕಳೆದ ಎರಡು ವರ್ಷಕ್ಕೂ ಹೆಚ್ಚು ದಿನಗಳಿಂದ ಸುದೀಪ್ ಸಿನಿಮಾ ಬಂದಿರಲಿಲ್ಲ. ಹೀಗಾಗಿ ಎಲ್ಲರೂ ಸಂಭ್ರಮಿಸಿದ್ದಾರೆ. ಈ ಸಂಭ್ರಮಕ್ಕಾಗಿ ನಟ ಹಾಗೂ ಸುದೀಪ್ ಆಪ್ತ ಪ್ರದೀಪ್ ಕೇಕ್ ವೊಂದನ್ನು ತೆಗೆದುಕೊಂಡು ಬಂದು ಕಟ್ ಮಾಡಿಸಿದ್ದರು. ಅದು ನಟ ದರ್ಶನ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ.
ಕೇಕ್ ಮೇಲೆ ಬಾಸಿಸಂ ಕಾಲ ಮುಗೀತು. ಮ್ಯಾಕ್ಸಿಮಮ್ ಕಾಲ ಶುರುವಾಯ್ತು ಎನ್ನುವ ಸಾಲುಗಳನ್ನು ಬರೆಸಲಾಗಿತ್ತು. ಸ್ಯಾಂಡಲ್ ವುಡ್ ಅಂಗಳದಲ್ಲಿ ಬಾಸ್ ಅಂತಾ ಅತೀ ಹೆಚ್ಚು ಕರೆಯುವುದು ಅದು ನಟ ದರ್ಶನಗೆ. ಡಿ ಬಾಸ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವುದು. ಅವರ ಬದುಕಿನಲ್ಲಿ ಈಗ ನಡೆಯುತ್ತಿರುವ ಕೆಲ ಕಹಿ ಘಟನೆಗಳ ನಡುವೆ ಬಾಸಿಸಂ ಕಾಲ ಮುಗೀತು ಎನ್ನುವ ಸಾಲುಗಳನ್ನು ಕೇಕ್ ಮೇಲೆ ಬರೆದಿದ್ದಕ್ಕೆ ಅವರ ಫ್ಯಾನ್ಸ್ ಸುದೀಪ್ ಆಪ್ತನ ವಿರುದ್ಧ ತಿರುಗಿಬಿದ್ದಿದ್ದಾರೆ. ಇದಕ್ಕೆ ಪ್ರದೀಪ್ ಸ್ಪಷ್ಟನೆ ಕೊಡುವ ಕೆಲಸ ಮಾಡಿದ್ದಾರೆ. ಅದು ಇಲ್ಲಿದೆ ನೋಡಿ.
#MaxTheMovie #MaximumMassMax pic.twitter.com/gl1826o1iJ
— Tiger | ಪ್ರದೀಪ್ {Pradeep} (@Theactorpradeep) December 26, 2024