ಪ್ರಜಾಸ್ತ್ರ ಸುದ್ದಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವಿನ ಗೆಳೆತನ ಮರೆಯಾಗಿ ಬಹುಕಾಲವೇ ಆಗಿದೆ. ಹೀಗಾಗಿ ಇವರಿಬ್ಬರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳನ್ನು ಜಗಳ ಮಾಡಿಕೊಳ್ಳುತ್ತಲೇ ಇರ್ತಾರೆ. ಚಂದನವನದಲ್ಲಿ ಸ್ಟಾರ್ ವಾರ್ ನಡೆಯುತ್ತಲೇ ಇರುತ್ತೆ. ಈಗ ಸುದೀಪ್ ಅಭಿಮಾನಿಗಳು ಮಾಡಿದ ಕೆಲಸದಿಂದ ದರ್ಶನ್ ಫ್ಯಾನ್ಸ್ ಗರಂ ಆಗಿದ್ದಾರೆ. ಬುಧವಾರ ಬಿಡುಗಡೆಯಾದ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ ಬಿಗ್ ಓಪನಿಂಗ್ ಕಂಡಿದೆ. ಇದರ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಗಿದೆ.
ಸುದೀಪ್ ಆಪ್ತ ಪ್ರದೀಪ್ ಸೇರಿದಂತೆ ಇತರರು ಭಾಗಿಯಾಗಿ ಕೇಕ್ ಕಟ್ ಮಾಡಿದ್ದಾರೆ. ಇಲ್ಲಿ ಬರೀ ಕೇಕ್ ಅಥವ ಚಿತ್ರ, ನಟನ ಬಗ್ಗೆ ಇದ್ದರೆ ಏನೂ ಕಿರಿಕ್ ಆಗುತ್ತಿರಲಿಲ್ಲ. ಆದ್ರೆ ಕೇಕ್ ಮೇಲೆ Bossism ಕಾಲ ಮುಗೀತು Maximum Mass ಕಾಲ ಶುರುವಾಯ್ತು ಎಂದು ಬರೆಯಲಾಗಿದೆ. ಡಿ ಬಾಸ್ ಅಭಿಮಾನಿಗಳನ್ನು ರೊಚ್ಚಿಗೇಳಿಸುವಂತೆ ಮಾಡಿದೆ. ಪ್ರದೀಪ್ ಸಂಭ್ರಮದ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಕಿಡಿ ಹೊತ್ತಿಕೊಂಡಿದೆ. ಮತ್ತೆ ಸ್ಟಾರ್ ವಾರ್ ಶುರು ಮಾಡುವ ನಟರಿಬ್ಬರ ನಡುವಿನ ಮನಸ್ಥಾಪವನ್ನು ಮತ್ತಷ್ಟು ಹೆಚ್ಚು ಮಾಡಿ ಅದನ್ನೇ ಮುಂದುವರೆಸುವಂತೆ ಮಾಡುತ್ತಿರುವುದು ಬೇಡದ ವಿಷಯವಾಗಿದೆ.
#MaximumMassMax #MAXimumBlockbuster pic.twitter.com/R07SM6O9Vw
— Tiger | ಪ್ರದೀಪ್ {Pradeep} (@Theactorpradeep) December 25, 2024