ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಅಭಿಮಾನಿಗಳಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಒಂದಿಷ್ಟು ವಿವಾದ ಸಹ ನಡೆದಿದೆ. ಕೇಕ್ ಮೇಲೆ ಬಾಸಿಸಂ ಎಂದು ಬರೆದಿದ್ದು ಒಂದು ಕಡೆ ವಿವಾದ ಮಾಡಿದರೆ, ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಆದ ತಪ್ಪು ಮತ್ತೊಂದು ಕಡೆ. ಇದಕ್ಕೆ ನಟ ಸುದೀಪ್ ಥ್ಯಾಂಕ್ಸ್ ಮೀಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಯ ಚಕ್ರವರ್ತಿ ಆಗುವ ಬದಲು ಅಭಿನಯ ಚತ್ರವರ್ತಿ ಎಂದು ಆಗಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಈ ಬಗ್ಗೆ ಮಾತನಾಡಿರುವ ಸುದೀಪ್, ಇದು ಸಣ್ಣದೊಂದು ತಪ್ಪು. ಚಿತ್ರದ ಯಶಸ್ಸು ಮುಖ್ಯ. ಅದು ಅಲ್ಲದೆ ಚಿತ್ರದ ನಿರ್ದೇಶಕರು ಕನ್ನಡದವರಲ್ಲದ ಕಾರಣ ಅವರಿಗೆ ಗೊತ್ತಾಗಿಲ್ಲ. ಮೊದಲು ತಪ್ಪಾಗಿರುವ ಟೈಟಲ್ ಕಾರ್ಡ್ ನೋಡಿದ್ದೀರಿ. ನಂತರ ಸಿನಿಮಾ ನೋಡಿದ್ದೀರಿ. ಚಿತ್ರದ ಮುಂದೆ ಅದು ಸಣ್ಣದು. ತುಂಬಾ ಕೊರತೆ ಇರುವ ನನ್ನನ್ನೇ ನನ್ನ ತಾಯಿ ಕ್ಷಮಿಸಿ ಬೆಳೆಸಿದ್ದಾರೆ. ಕ್ಷಮೆ ಅನ್ನೋದು ತಾಯಿಯ ಗುಣ ಎಂದು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕೇಳಿದ ಕ್ಷಮೆಗೆ ಈ ರೀತಿಯಾಗಿ ಉತ್ತರಿಸಿದರು.