ಪ್ರಜಾಸ್ತ್ರ ಸುದ್ದಿ
ಬೆಂಳೂರು(Bengaloru): ರಾಜ್ಯಸಭಾ ಸದಸ್ಯೆ, ಇನ್ಫೋಸೆಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ(Sudha Murty) ಮಾಡಿದ ಪೋಸ್ಟ್ ಈಗ ಸಖತ್ ಟ್ರೋಲ್ ಆಗುತ್ತಿದೆ. ವಿಡಿಯೋ ಮೂಲಕ ಮಾತನಾಡಿರುವ ಅವರು, 16ನೇ ರಾಣಿ ಕರ್ಣವತಿ(Rani Karnavati) ಸಣ್ಣ ಸಾಮ್ರಾಜ್ಯದ ಮೇಲೆ ದಾಳಿ ನಡೆದಾಗ ತನ್ನ ರಕ್ಷಣೆಗೆ ಬರಬೇಕೆಂದು ದೆಹಲಿಯ ಮೊಘಲ್ ರಾಜ ಹುಮಾಯಾನ್ ಗೆ ದಾರವೊಂದು ಕಳಿಸಿಕೊಟ್ಟಳು. ಇದು ಅವನಿಗೆ ಗೊತ್ತಾಗಲಿಲ್ಲ. ಅಲ್ಲಿದ್ದವರಿಗೆ ಕೇಳಿ ತಿಳಿದಾಗ, ಇದು ಸಹೋದರಿ ಸಂಕಷ್ಟದಲ್ಲಿದ್ದಾಗ ಸಹೋದರ ಸಹಾಯ ಮಾಡಲಿ ಎಂದು ಕೇಳಿಕೊಳ್ಳುವ ಒಂದು ಕರೆ. ಇದು ಈ ನೆಲದ ಸಂಪ್ರದಾಯವೆಂದು ಹೇಳುತ್ತಾರೆ. ಆಗ ಹುಮಾಯಾನ್ ದೆಹಲಿಯಿಂದ ಹೊರಟು ರಾಣಿ ಕರ್ಣವತಿ ರಾಜ್ಯಕ್ಕೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿರುತ್ತಾಳೆ. ಹೀಗಾಗಿ ಸಹೋದರಿ ತೊಂದರೆಯಲ್ಲಿದ್ದಾಗ ರಕ್ಷಿಸು ಎನ್ನುವ ಸಂದೇಶ ರಕ್ಷಾ((Raksha Bandhan) )ಬಂಧನಲ್ಲಿದೆ ಎಂದು ಹೇಳಿದ್ದಾರೆ.
ಇದನ್ನು ಅನೇಕರು ಖಂಡಿಸಿದ್ದಾರೆ. ಹುಮಾಯಾನ್(Humayun) ಅಸಂಖ್ಯಾತ ಹಿಂದೂಗಳ ಹತ್ಯೆಗೆ ಕಾರಣನಾಗಿದ್ದಾನೆ. ಹೆಣ್ಮಕ್ಕಳ ಮಾನ, ಪ್ರಾಣ ಕಳೆಯಲಾಗಿದೆ. ಪುರಾಣ, ಇತಿಹಾಸದಲ್ಲಿಯೇ ಇದರ ಉಲ್ಲೇಖವಿದೆ. ಶ್ರೀಕೃಷ್ಣನ(Lord Krishna) ಕಾಲದಲ್ಲಿಯೇ ರಕ್ಷಾ ಬಂಧನ ಪ್ರಾರಂಭವಾಗಿದೆ. ಶ್ರೀಕೃಷ್ಣ ಹಾಗೂ ದ್ರೌಪದಿ ನಡುವಿನ ಅಣ್ಣ, ತಂಗಿಯ ಬಾಂಧವ್ಯದ ಸೂಚಿಸುವ ಹಬ್ಬವಾಗಿದೆ. ಇದಕ್ಕೆ ಹುಮಾಯನ್ ನ ಉದಾಹರಣೆ ಕೊಡಬೇಡಿ. ನಮ್ಮ ಪೌರಾಣಿಕೆ ಹಿನ್ನಲೆಯ ಹಬ್ಬಕ್ಕೆ ದಾಳಿಕೋರನೊಂದಿಗೆ ಹೋಲಿಕೆ ಮಾಡಬೇಡಿ ಎಂದು ಟ್ರೋಲ್ ಮಾಡಲಾಗುತ್ತಿದೆ.