ಪ್ರಜಾಸ್ತ್ರ ಸುದ್ದಿ
ಬೆಳ್ತಂಗಡಿ(Beltangadi): ನನ್ನ ಮಗಳು ಅನನ್ಯ ಭಟ್ ಧರ್ಮಸ್ಥಳಕ್ಕೆ ಹೋದವಳು ಕಣ್ಮರೆಯಾಗಿದ್ದಾಳೆ. ಆಕೆಯ ಅಸ್ಥಿಯಾದರೂ ಕೊಡಿ ಎಂದು ಹೇಳಿದ್ದ ಸುಜಾತಾ ಭಟ್ ಅನ್ನೋ ವೃದ್ಧೆ ಇದೀಗ ಎಸ್ಐಟಿ ಮುಂದೆ ಇದೆಲ್ಲ ಸುಳ್ಳು ಎಂದಿದ್ದಾಳಂತೆ. ನನ್ನಿಂದ ತಪ್ಪಾಗಿದೆ. ಪ್ರಕರಣ ಹಿಂದಕ್ಕೆ ಪಡೆಯುತ್ತೇನೆ ಎಂದು ಬುಧವಾರ ಎಸ್ಐಟಿ ವಿಚಾರಣೆ ವೇಳೆ ಹೇಳಿದ್ದಾಳಂತೆ. ಇದಕ್ಕೆ ಒಪ್ಪದ ಅಧಿಕಾರಿಗಳು ವಿಚಾರಣೆಯನ್ನು ಮುಂದುವರೆಸಿದ್ದಾರಂತೆ.
ನಾನು ಹೇಳಿದ್ದು ಸುಳ್ಳು. ತಪ್ಪಾಗಿದೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿದ್ದು, ಇದರ ಹಿಂದೆ ಇರುವವರ ಹೆಸರು ಹೇಳಿದ್ದಾಳೆ ಅಂತಾ ಹೇಳಲಾಗುತ್ತಿದೆ. ಅವರು ಯಾರು? ಯಾವ ಕಾರಣಕ್ಕೆ ಹೀಗೆ ಮಾಡಿದ್ದಾರೆ? ಇದರ ಹಿಂದಿರುವ ಉದ್ದೇಶ ಏನು? ನಿಜಕ್ಕೂ ಸುಜಾತಾ ಭಟ್ ಯಾರದಾದರು ಹೆಸರು ಹೇಳಿದ್ದಾರ ಅನ್ನೋದು ಸೇರಿದಂತೆ ಹಲವು ಪ್ರಶ್ನೆಗಳು ಮೂಡಿವೆ.