ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಡಾಬಾ ಪ್ರಾಂಚೈಸಿ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಬಾಲಿವುಡ್ ಹಿರಿಯ ನಟ ಧರ್ಮೇದ್ರ ಸೇರಿದಂತೆ ಮೂವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈ ಕುರಿತು ಕೋರ್ಟ್ ಗೆ ಉತ್ತರ ನೀಡಲಾಗುವುದು ಎಂದು ಹಿರಿಯ ನಟ ಧರ್ಮೇಂದ್ರ ಪರ ವಕೀಲರು ಮಂಗಳವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಡಾಬಾ ತೆರೆಯಲು ಧರ್ಮೇಂದ್ರ ಕಡೆಯವರಿಗೆ 2018ಲ್ಲಿ 17.70 ಲಕ್ಷ ರೂಪಾಯಿ ನೀಡಲಾಗಿತ್ತು. ಆದರೆ, ತಮಗೆ ವಂಚನೆ ಮಾಡಿದ್ದಾರೆ ಎಂದು ಉದ್ಯಮಿ ಸುಶೀಲ್ ಕುಮಾರ್ ಎಂಬುವರು ದೂರು ದಾಖಲಿಸಿದ್ದಾರೆ. ಈ ಸಂಬಂಧ ಸಮನ್ಸ್ ಜಾರಿ ಮಾಡಲಾಗಿದೆ.