ಪ್ರಜಾಸ್ತ್ರ ಸುದ್ದಿ
ಕೇಪ್ ಕೆನವೆರಲ್: ಕಳೆದ ಜೂನ್ ಬಾಹ್ಯಾಕಾಶ ಕೇಂದ್ರಕ್ಕೆ(International Space Station) ತೆರಳಿದ್ದ ಅಮೆರಿಕಾ ನಿವಾಸಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು 9 ತಿಂಗಳ ಬಳಿಕ ಭೂಮಿಗೆ ಬಂದಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಅಲ್ಲಿಯೇ ಸಿಲುಕಿಕೊಂಡಿದ್ದ ಇವರನ್ನು ವಾಪಸ್ ಕರೆದುಕೊಂಡು ಬರುವ ಯೋಜನೆ ಯಶಸ್ವಿಯಾಗಿದ್ದು, ಬುಧವಾರ ಮುಂಜಾನೆ 3.27ರ ಸುಮಾರಿಗೆ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ.
ಒಂದು ವಾರದ ಯೋಜನೆಗಾಗಿ ಅಲ್ಲಿಗೆ ಹೋದವರು 9 ತಿಂಗಳ ಕಾಲ ಕಳೆಯಬೇಕಾಯಿತು. ಬೋಯಿಂಗ್ ಸ್ಟಾರ್ ಲೈನರ್ ಮಿಷನ್ ನಲ್ಲಿ ಸಮಸ್ಯೆ ಕಂಡು ಬಂದು ಅಲ್ಲಿಯೇ ಸಿಲುಕಿಕೊಂಡಿದ್ದರು. ಇನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 2024ರ ಜೂನ್ ನಿಂದ ಸಿಲುಕಿಕೊಂಡಿದ್ದ ನಿಕ್ ಹೇಗ್ ಹಾಗೂ ಅಲೆಕ್ಸಾಂಡರ್ ಗೋರ್ಬುನೋವ್ ಇವರನ್ನು ಸಹ ಕರೆದುಕೊಂಡು ಬರಲಾಗಿದೆ.
ಐಎಸ್ಎಸ್ ಕ್ರೊ-9 ಮೂಲಕ 4 ಜನರ ತಂಡ ತೆರಳಿತ್ತು. ಅವರೆಲ್ಲರನ್ನು ಡ್ರ್ಯಾಗನ್ ನೌಕೆ ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಹ್ಯೂಸ್ಟನ್ ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟಗಳ ಪ್ರಧಾನ ಕಚೇರಿಯಿಂದ ಜಾನ್ಸನ್ ಕೇಂದ್ರಕ್ಕೆ ಹೋಗಿದ್ದಾರೆ. ಮಾನವ ಸಹಿತ ಪರೀಕ್ಷಾರ್ಥವಾಗಿ ಜೂನ್ 5, 2024ರಂದು ಸುನೀತಾ ವಿಲಿಯಮ್ಸ್ ಹಾಗೂ ಬುಚ್ ತೆರಳಿದ್ದರು. ಜೂನ್ 14ರಂದು ಅಲ್ಲಿಂದ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ 9 ತಿಂಗಳ ಕಾಲ ಅಲ್ಲಿ ಕಳೆಯಬೇಕಾಯಿತು. ಇದೀಗ ಎಲ್ಲರಿಗೂ ಖುಷಿಯಾಗಿದ್ದು, ಭಾರತದ ಪ್ರಧಾನಿ ಮೋದಿ ಪತ್ರ ಬರೆಯುವ ಮೂಲಕ ಭಾರತಕ್ಕೆ ಆಹ್ವಾನ ನೀಡಿದ್ದಾರೆ.