ಪ್ರಜಾಸ್ತ್ರ ಸುದ್ದಿ
ಕೊಚ್ಚಿ(kochi): ಮಲಯಾಳಂ ಸಿನಿ ದುನಿಯಾದ ಸೂಪರ್ ಸ್ಟಾರ್ ಮೋಹನ್ ಲಾಲ್(mohanlal) ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಯ ಅಮೃತಾ ಆಸ್ಪತ್ರೆ ಭಾನುವಾರ ಈ ಕುರಿತು ಮಾಹಿತಿ ನೀಡಿದೆ. ವೈರಲ್ ಉಸಿರಾಟದ ಸೋಂಕು ತಗುಲಿದೆ. ಒಂದು ವಾರ ಕಾಲ ವಿಶ್ರಾಂತಿ ಪಡೆಯಲು ಹೇಳಲಾಗಿದೆಯಂತೆ.
ಎಲ್ 2 ಎಂಪುರಾನ್ ಚಿತ್ರದ ಶೂಟಿಂಗ್ ಸಲುವಾಗಿ ಗುಜರಾತಿಗೆ ತೆರಳಿದ್ದರು. ಶೂಟಿಂಗ್ ಮುಗಿಸಿಕೊಂಡು ಬಂದಿದ್ದ ಅವರಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ವೈರಲ್ ಸೋಂಕು ತಗುಲಿರುವ ಕಾರಣ ಹೆಚ್ಚು ಜನರು ಇರುವ ಕಡೆ ಸೇರಿದಂತೆ ಹೇಳಲಾಗಿದೆ. ಹೀಗಾಗಿ ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. 64 ವರ್ಷದ ಮೋಹನ್ ಲಾಲ್ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸೌಥ್ ಇಂಡಿಯನ್ ಸೂಪರ್ ಸ್ಟಾರ್ ನಟರಾಗಿದ್ದಾರೆ.