Ad imageAd image

ಅಲಹಾಬಾದ್ ಹೈಕೋರ್ಟ್ ವಿವಾದಿತ ಅಭಿಪ್ರಾಯಕ್ಕೆ ಸುಪ್ರೀಂ ತಡೆ

Nagesh Talawar
ಅಲಹಾಬಾದ್ ಹೈಕೋರ್ಟ್ ವಿವಾದಿತ ಅಭಿಪ್ರಾಯಕ್ಕೆ ಸುಪ್ರೀಂ ತಡೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಅಲಹಾಬಾದ್ ಹೈಕೋರ್ಟ್(Allahabad High Court) ಆದೇಶದಲ್ಲಿನ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್ ಬೇಸರ ಹೊರ ಹಾಕಿದೆ. ಅಲ್ಲದೆ ಅದಕ್ಕೆ ತಡೆಯನ್ನು(Stay) ಸಹ ನೀಡಿದೆ. ಸಂತ್ರಸ್ತೆಯ ಸ್ತನ(Breasts) ಹಿಡಿಯುವುದು, ಪೈಜಾಮ್ ದಾರ ಎಳೆಯುವುದು ಅತ್ಯಾಚಾರವಾಗುವುದಿಲ್ಲವೆಂದು ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದನ್ನು ನೋವಿನ ವಿಚಾರ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಸೂಕ್ಷ್ಮತೆ ಕೊರತೆ. ಇಂತಹ ಆದೇಶಗಳು ಸಂವೇದನಾರಹಿತ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಈ ವಿವಾದಾತ್ಮಕ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಹಾಗೂ ಇತರರಿಗೆ ಸುಪ್ರೀಂ ಕೋರ್ಟ್(Supreme Court) ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಆಗಸ್ಟೀನ್ ಜಾರ್ಜ್ ಮಸೀಹ್ ನೇತೃತ್ವದ ಪೀಠ ನೋಟಿಸ್ ಜಾರಿ ಮಾಡಿದೆ. ಇದು ಅಮಾನವೀಯ ವಿಧಾನ ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದ್ದು, ಕಾನೂನು(Law) ತಜ್ಞರು ಸಹ ಇದನ್ನು ವಿರೋಧಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಮಮನೋಹರ ನರಾಯಣ ಮಿಶ್ರಾ ಅವರು ನೀಡಿದ ಆದೇಶದಲ್ಲಿ ಇಂತಹ ಅಭಿಪ್ರಾಯವಿದೆ.

WhatsApp Group Join Now
Telegram Group Join Now
Share This Article