ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ವಕೀಲನೊಬ್ಬ ಶೋ ಎಸೆದಿರುವ ಘಟನೆ ಸೋಮವಾರ ನಡೆದಿದೆ. ಸಿಜಿಐ ಪೀಠದ ಮುಂದೆ ವಕೀಲರ ಪ್ರಕರಣಗಳ ಕುರಿತು ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲನೊಬ್ಬ ಶೋ ಎಸೆದಿದ್ದು, ಭದ್ರತಾ ಸಿಬ್ಬಂದಿ ಅವನನ್ನು ಹೊರಗೆ ಎಳೆದುಕೊಂಡು ಹೋಗಿದ್ದಾರೆ.
ಈ ವೇಳೆ ಸಿಜೆಐ ಅವರು ವಿಚಲಿತರಾಗದೆ ವಾದ ಮುಂದುವರೆಸುವಂತೆ ಹೇಳಿದ್ದಾರೆ. ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದಿದ್ದಾರಂತೆ. ವಕೀಲನನ್ನು ಹೊರಗೆ ಎಳೆದ್ಯೊಯುವಾಗ ಸನಾತನ ಧರ್ಮದ ಅಪಮಾನ ಸಹಿಸುವುದಿಲ್ಲ ಎಂದು ಕೂಗಿದ್ದಾನಂತೆ.