ಪ್ರಜಾಸ್ತ್ರ ಸುದ್ದಿ
ದೆಹಲಿ(New Delhi): 2020ರ ದೆಹಲಿಯ ಗಲಭೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಜೆಎನ್ ಯು ಹಳೆಯ ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ವಿ ಅಂಜಾರಿಯಾ, ಅರವಿಂದ್ ಕುಮಾರ್ ಅವರಿದ್ದ ಪೀಠ ನಡೆಸಿತು.
ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಇತರೆ ಆರೋಪಿಗಳಾದ ಶಿಫಾ ಉರ್ ರೆಹಮಾನ್, ಮೀರನ್ ಹೈದರ್, ಗುಲ್ಪಿಶಾ ಫಾತಿಮಾ, ಶಾದಬ್ ಅಹ್ಮದ್, ಮೊಹಮದ್ ಸಲೀಮ್ ಖಾನ್ ಅವರಿಗೆ ಜಾಮೀನು ನೀಡಿದೆ. ಉಮರ್, ಶಾರ್ಜೀಲ್ ಹಾಗೂ ಇತರೆ ಆರೋಪಿಗಳ ಪಾತ್ರ ಭಿನ್ನವಾಗಿವೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿರುವ ಆರೋಪಗಳು ಬಲವಾಗಿವೆ ಎಂದು ನಾವು ಪರಿಶೀಲಿಸಬೇಕು ಎಂದು ಪೀಠ ಹೇಳಿದೆ.




