Ad imageAd image

ಆಸ್ತಿ ಘೋಷಣೆ ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು

Nagesh Talawar
ಆಸ್ತಿ ಘೋಷಣೆ ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಪಾರದರ್ಶಕತೆ ತರುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 55.75 ಲಕ್ಷ ರೂಪಾಯಿ ಭದ್ರತಾ ಠೇವಣಿ ಹೊಂದಿದ್ದಾರೆ. ದೆಹಲಿ ದಕ್ಷಿಣ ಭಾಗದಲ್ಲಿ 3 ಬೆಡ್ ರೂಂ ಫ್ಲಾಟ್, ಕಾಮನ್ ವೆಲ್ತ್ ಗೇಮ್ಸ್ ವಿಲೇಜ್ ನಲ್ಲಿ 4 ಬೆಡ್ ರೂಮ್ ಗಳ 2,446 ಚದರ ಅಡಿಯ ಅಪಾರ್ಟ್ ಮೆಂಟ್ ಇದೆ ಎಂದು ವೆಬ್ ಸೈಟ್ ನಲ್ಲಿ ಘೋಷಿಸಿದ್ದಾರೆ.

ಇನ್ನು ಗುರುಗ್ರಾಮದ ಸೆಕ್ಟರ್ 49ರಲ್ಲಿ ಸಿಸ್ಪಾಲ್ ನಲ್ಲಿರುವ ನಾಲ್ಕು ಕೋಣೆಗಳ ಫ್ಲಾಟ್ ನಲ್ಲಿ ಶೇಕಡ 56ರಷ್ಟು ಪಾಲು ಇದೆ. ಹಿಮಾಲಚದ ಡೌಲ್ಹೌಸಿಯಲ್ಲಿ 2016 ಚದರಿ ಅಡಿಯ ಸೂಪರ್ ಏರಿಯಾ ಹಾಗೂ ಮನೆ, ಭೂಮಿಯಲ್ಲಿ ಪಾಲು, ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ 1.06 ಕೋಟಿ ಹೂಡಿಕೆ, 29,625 ಎಲ್ಐಸಿ ಮನಿ ಬ್ಯಾಂಕ್ ಪಾಲಿಸಿ, 14 ಸಾವಿರ ಮೌಲ್ಯದ ಷೇರು, 1,77,89 000 ಜಿಪಿಎಫ್ ಹೊಂದಿದ್ದಾರೆ. ಇದರ ಜೊತೆಗೆ 250 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, ಉಡುಗರೆಯಾಗಿ ಬಂದ ಮಾರುತಿ ಸ್ವಿಫ್ಟ್ ಕಾರಿದೆ.

ಖನ್ನಾ ಬಳಿಕ ಸಿಜಿಐ ಆಗಲಿರುವ ಬಿ.ಆರ್ ಗವಾಯಿ ಅವರ ಬ್ಯಾಂಕಿನಲ್ಲಿ 19.63 ಲಕ್ಷ ರೂಪಾಯಿ, ಮಹಾರಾಷ್ಟ್ರದ ಅಮರಾವತಿಯಲ್ಲಿ ತಂದೆಯಿಂದ ಬಂದ ಮನೆ, ಮುಂಬೈನ ಬಾಂದ್ರಾ, ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಒಂದೊಂದು ಅಪಾರ್ಟ್ ಮೆಂಟ್, ನಾಗ್ಪುರ್ ಹಾಗೂ ಅಮರಾವತಿಯಲ್ಲಿ ಜಮೀನು, ಪತ್ನಿಯ ಹೆಸರಲ್ಲಿ 29.70 ಲಕ್ಷದ ಚಿನ್ನದ ಆಭರಣ, 61,320 ರೂಪಾಯಿ ಠೇವಣಿ, ಗವಾಯಿ ಅವರ ಬಂಗಾರದ ಆಭರಣ ಸೇರಿ 5.25 ಲಕ್ಷ ರೂಪಾಯಿ ಚಿರಾಸ್ತಿ ಹೊಂದಿದ್ದಾರೆ.

ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ಆಸ್ತಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ. 33 ನ್ಯಾಯಮೂರ್ತಿಗಳ ಪೈಕ್ 21 ನ್ಯಾಯಮೂರ್ತಿಗಳ ಆಸ್ತಿ ಮಾಹಿತಿ ಹಂಚಿಕೊಳ್ಳಲಾಗಿದೆ. ಉಳಿದವರ ಮಾಹಿತಿ ಪಡೆದ ಬಳಿಕ ಅಪ್ ಲೋಡ್ ಮಾಡಲಾಗುವುದು ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now
Share This Article