ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ(Sexual assault) ಆರೋಪದ ಮೇಲೆ ಜೈಲು ಸೇರಿದ್ದ ಜೆಡಿಎಸ್(JDS) ಎಂಎಲ್ಸಿ ಸೂರಜ್ ರೇವಣ್ಣಗೆ ಜಾಮೀನು ಸಿಕ್ಕಿದೆ. ಮಂಗಳವಾರ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಎಲ್ಲದಕ್ಕೂ ಉತ್ತರ ಸಿಗುತ್ತೆ. ನಾನೇ ಇನ್ನು ಎರಡ್ಮೂರು ದಿನಗಳಲ್ಲಿ ಮಾಧ್ಯಮದ ಮುಂದೆ ಹೇಳುತ್ತೇನೆ ಎಂದರು. ಶಿವಕುಮಾರ್ ಆಪ್ತನೂ ಅಲ್ಲ, ಕಾರು ಚಾಲಕನೂ ಅಲ್ಲ. ಲೋಕೇಶ್ ಅನ್ನೋ ಒಬ್ಬನೆ ಕಾರು ಚಾಲಕ ಇರುವುದು.
ರೇವಣ್ಣವರಿಗಾಗಲಿ, ನಮಗಾಗಲಿ ಕಪ್ಪು ಚುಕ್ಕೆ ಇಲ್ಲ. ಹಾಸನದಲ್ಲಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರವಿದು. ನಾವೇನು ಎಲ್ಲೂ ಓಡಿ ಹೋಗಲ್ಲ. ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ನ್ಯಾಯಾಂಗದ(Judiciary) ಮೇಲೆ ಸಂಪೂರ್ಣ ವಿಶ್ವಾಸವಿದೆ. ನಾನು ಎಲ್ಲಿಯೂ ಹೋಗಲ್ಲ. ಇನ್ನು ಎರಡ್ಮೂರು ದಿನಗಳಲ್ಲಿ ಎಲ್ಲದಕ್ಕೂ ಸ್ಪಷ್ಟತೆ ಕೊಡುತ್ತೇನೆ ಅಂತಾ ಹೇಳಿದರು.