Ad imageAd image

ರಾಜ್ಯ ಸರ್ಕಾರಕ್ಕೆ ಸರ್ಜರಿ ಆಗುತ್ತಾ?

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ವಿಪಕ್ಷಗಳ ಆಂತರಿಕ ಕಚ್ಚಾಟದ ನಡುವೆಯೇ ರಾಜ್ಯ

Nagesh Talawar
ರಾಜ್ಯ ಸರ್ಕಾರಕ್ಕೆ ಸರ್ಜರಿ ಆಗುತ್ತಾ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ವಿಪಕ್ಷಗಳ ಆಂತರಿಕ ಕಚ್ಚಾಟದ ನಡುವೆಯೇ ರಾಜ್ಯ ಸರ್ಕಾರಕ್ಕೆ ಸರ್ಜರಿ ಆಗುತ್ತೆ ಎನ್ನುವ ಮಾತುಗಳು ಕೇಳಿ ಬಂದಿವೆ. ಕರ್ನಾಟಕ ಸರ್ಕಾರದ ಸಚಿವ ಸಂಪುಟ(cabinet reshuffle) ಪುನರ್ ರಚನೆ ಮಾಡಲು ಕೈ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಯಾರಿಂದ ಸಚಿವ ಸ್ಥಾನ ಕಿತ್ತುಕೊಂಡು ಯಾರಿಗೆ ಕೊಡಲಾಗುತ್ತೆ? ಯಾರ ಯಾರ ಖಾತೆಗಳು ಬದಲಾಗುತ್ತೆ ಅನ್ನೋ ಪ್ರಶ್ನೆ ಎದ್ದಿದೆ.

ಸಚಿವರ ಕಾರ್ಯಶೈಲಿ ಆಧಾರದ ಮೇಲೆ ಎಂದು ಹೇಳುತ್ತಿದ್ದೂ, ಈ ಬಾರಿ ಲೋಕಸಭೆಯಲ್ಲಿ ನಿರೀಕ್ಷಿತ ಗೆಲುವು ತಂದುಕೊಡುವಲ್ಲಿ ವಿಫಲರಾದ ಸಚಿವರ ಖಾತೆಗೆ ಕುತ್ತು ಬರಲಿದೆ ಎನ್ನಲಾಗುತ್ತಿದೆ. ಈ ವರ್ಷಾಂತ್ಯಕ್ಕೆ ಸಚಿವ ಸಂಪುಟ ಪುನರ್ ರಚನೆಯಾಗುವುದು ಬಹುತೇಕ ಖಚಿತವಂತೆ. ಇಂದು ದೆಹಲಿಯಲ್ಲಿ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳ ಸಭೆ ನಡೆಯುತ್ತಿದೆ. ಇಲ್ಲಿ ಏನೆಲ್ಲ ತೀರ್ಮಾನವಾಗುತ್ತೆ ಎನ್ನುವ ಕುತೂಲಹವಿದೆ.

WhatsApp Group Join Now
Telegram Group Join Now
Share This Article