ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ ನರವಣೆ ಅವರ ಅಪ್ರಕಟಿತ ಆತ್ಮಚರಿತೆಯ ವಿಚಾರವಾಗಿ ಮಂಗಳವಾರ ಲೋಕಸಭೆಯಲ್ಲಿ ಗದ್ದಲವಾಗಿದೆ. ಹೀಗಾಗಿ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮುಂದೂಡಿದರು. ಸದನದ ಬಾವಿಗಿಳಿದು ಪ್ರತಿಭಟಿಸಿದ ವಿಪಕ್ಷಗಳ ಸದಸ್ಯರು ಸರಂಡರ್ ಮೋದಿ ಎಂದು ಘೋಷಣೆ ಕೂಗಿದರು.
ನರವಣೆ ಅವರ ಆತ್ಮಚರಿತ್ರೆಯ ಪುಸ್ತಕ ಪ್ರಕಟವಾಗಬೇಕಿದೆ. ಅದರ ಕೆಲವು ಭಾಗಗಳನ್ನು ಉಲ್ಲೇಖಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಅವಕಾಶ ನೀಡಿಲ್ಲ. ಇದೆ ವಿಚಾರವಾಗಿ ಸೋಮವಾರವೂ ಗಲಾಟೆಯಾಗಿದೆ. ಈ ಬಗ್ಗೆ ಉಲ್ಲೇಖಿಸಬಾರದು ಎಂದು ಸ್ಪೀಕರ್ ಹೇಳಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸುವುದು ಒಳ್ಳೆಯದಲ್ಲವೆಂದು ಹೇಳಿದರು. ಪಟ್ಟು ಬಿಡದ ವಿಪಕ್ಷಗಳ ಸದಸ್ಯರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು.




