ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮಹಾನ್ ಸಂತ, ಯೋಗಿಯಾದ ಸ್ವಾಮಿ ವಿವೇಕಾನಂದರು ತಮ್ಮ ಅಧ್ಯಾತ್ಮದ ಶಕ್ತಿಯಿಂದ ಜಗತ್ತನ್ನು ಭಾರತದತ್ತ ತಿರುಗಿ ನೋಡಿವಂತೆ ಮಾಡಿದವರು ಎಂದು ಹಿರಿಯ ಪತ್ರಕರ್ತರು, ಕಾನಿಪ ಮಾಜಿ ಅಧ್ಯಕ್ಷರಾದ ಆನಂದ ಶಾಬಾದಿ ಹೇಳಿದರು. ಪಟ್ಟಣದ ಆರ್.ಡಿ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಎನ್ಎಸ್ಎಸ್ ವತಿಯಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಸಿದ್ಧಾಂತಗಳನ್ನು ರೂಢಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು ಎಂದರು.
ಕಾನಿಪ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಶೇಖ್ ಮಾತನಾಡಿ, ಸ್ವಾಮಿ ವಿವೇಕಾನಂದರು ಎಂದೂ ಆರದ ಜ್ಯೋತಿ. ಈ ಜಗತ್ತು ಇರುವ ತನಕ ಅವರು ಇರುತ್ತಾರೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇಂತಹ ಮಹಾನ್ ವ್ಯಕ್ತಿಗಳ ಕುರಿತಾದ ಪುಸ್ತಕಗಳನ್ನು ಓದಬೇಕು. ಅದಕ್ಕಾಗಿ ನಿರಂತರ ಪರಿಶ್ರಮ ಹಾಕಿ ನೀವು ಸಾಧಕರಾಗುವ ಮೂಲಕ ಹೆತ್ತವರ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉಪನ್ಯಾಸಕರಾದ ಶಿವಶರಣ ಬೂದಿಹಾಳ, ಪ್ರಜಾಸ್ತ್ರ ವೆಬ್ ಪತ್ರಿಕೆಯ ಸಂಸ್ಥಾಪಕ ಸಂಪಾದಕ ನಾಗೇಶ ತಳವಾರ ಮಾತನಾಡಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಸುಪ್ರಿಯಾ ಸಜ್ಜನ, ಭಾಗೇಶ ನಾವಿ, ಐಶ್ವರ್ಯ ನಾಯ್ಕೋಡಿ, ಶಿವರಾಜ ಪೂಜಾರಿ ಅವರು ಸ್ವಾಮಿ ವಿವೇಕಾನಂದರ ಕುರಿತಾಗಿ ಮಾತನಾಡಿದರು. ಕಾಲೇಜಿನ ಉಪ ಪ್ರಾಚಾರ್ಯರಾದ ಪಿ.ವಿ ಮೇಲಿನಮಠ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬಂದಾಳ ಗ್ರಾಮದಲ್ಲಿ ಎನ್ಎಸ್ಎಸ್ ನಡೆಸಿದ ಶಿಬಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕರು ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರಸನ್ನ ಜೋಗುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎನ್.ಬಿ ಪೂಜಾರಿ, ಗ್ರಂಥಾಲಕರಾದ ನವೀನ ಶಳ್ಳಗಿ, ಸಿಬ್ಬಂದಿ ರೋಹಿತ ಸುಲ್ಫಿ, ದೊಡ್ಡಯ್ಯ ಸ್ಥಾವರಮೇಠ, ಉದಯ ಶಿವಸಿಂಪಗೇರ, ನೀಲಕಂಠ ಮೇತ್ರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪೂಜಾ ಮುಜಾವರ, ಅಪ್ಪುಗೌಡ ಪಾಟೀಲ ನಿರೂಪಿಸಿದರು. ವಿಶಾಲ ಮಾಣಸುಣಗಿ ವಂದಿಸಿದರು.




