Ad imageAd image

ಕೇಕ್ ತಿಂದು ಮಗು ಸಾವು, ಸಿಬ್ಬಂದಿ ಕುಟುಂಬದ ಪರ ನಿಂತ ಸ್ವಿಗ್ಗಿ ಸಂಸ್ಥೆ

ನಗರದ ಭುವನೇಶ್ವರ ನಗರದಲ್ಲಿ ಹಳಸಿದ ಕೇಕ್ ತಿಂದ ಪರಿಣಾಮ 5 ವರ್ಷದ ಮಗು ಮೃತಪಟ್ಟಿದ್ದು, ಹೆತ್ತವರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಸೋಮವಾರ ನಡೆದಿದೆ.

Nagesh Talawar
ಕೇಕ್ ತಿಂದು ಮಗು ಸಾವು, ಸಿಬ್ಬಂದಿ ಕುಟುಂಬದ ಪರ ನಿಂತ ಸ್ವಿಗ್ಗಿ ಸಂಸ್ಥೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಗರದ ಭುವನೇಶ್ವರ ನಗರದಲ್ಲಿ ಹಳಸಿದ ಕೇಕ್ ತಿಂದ ಪರಿಣಾಮ 5 ವರ್ಷದ ಮಗು ಮೃತಪಟ್ಟಿದ್ದು, ಹೆತ್ತವರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಸೋಮವಾರ ನಡೆದಿದೆ. ಬಾಲರಾಜ್ ಹಾಗೂ ನಾಗಲಕ್ಷ್ಮಿ ಎಂಬುವರ 5 ವರ್ಷದ ಮಗ ಧೀರಜ್ ಮೃತಪಟ್ಟಿದ್ದಾನೆ. ತಂದೆ, ತಾಯಿ ಇಬ್ಬರು ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನು ಮೃತ ಬಾಲಕನ ತಂದೆ ಬಾಲರಾಜ್ ಸ್ವಿಗ್ಗಿ(Swiggy) ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಿಬ್ಬಂದಿ ಕುಟುಂಬದಲ್ಲಿ ಇಂತಹದೊಂದು ಘಟನೆ ನಡೆದಿರುವುದಕ್ಕೆ ಸಂಸ್ಥೆಯ ಕಡೆಯಿಂದ ನೆರವು ನೀಡುವ ಕೆಲಸ ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಂಪತಿಯ ಆರೋಗ್ಯ ವಿಚಾರಿಸಲಾಗಿದೆ. ತಮ್ಮ ಕಡೆಯಿಂದ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು. ತನಿಖೆಗೆ ಸಂಪೂರ್ಣ ಸಹಕರಿಸಲಾಗುವುದು ಎಂದು ಪ್ರಜಾಸ್ತ್ರ ವೆಬ್ ಪತ್ರಿಕೆಗೆ ಸ್ವಿಗ್ಗಿ ವಕ್ತಾರರಾದ ಚೇತನ್ ದೇವರಾಜ್ ತಿಳಿಸಿದ್ದಾರೆ.

ಇನ್ನು ಆಹಾರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಸೇರುವ ಮುನ್ನ ಎಲ್ಲ ರೆಸ್ಟೋರೆಂಟ್ ಗಳು ಕಡ್ಡಾಯವಾಗಿ ಎಫ್ಎಸ್ಎಸ್ಎಐ(FSSIA) ಪರವಾನಿಗೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ವಿಗ್ಗಿ ವಕ್ತಾರರಾದ ಚೇತನ್ ದೇವರಾಜ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article