ಪ್ರಜಾಸ್ತ್ರ ಸುದ್ದಿ
ಶ್ರೀನಗರ(Srinagara): ಇಲ್ಲಿನ ಹಜರತ್ ಬಾಲ್ ದರ್ಗಾದ ನವೀಕರಣವನ್ನು ಇತ್ತೀಚೆಗೆ ಮಾಡಲಾಗಿದೆ. ವಕ್ಫ್ ಮಂಡಳಿಯ ಅಧ್ಯಕ್ಷೆ ಸೈಯದ್ ದರಕ್ಷಾನ್ ಅಂದ್ರಾಬಿಯವರು ಉದ್ಘಾಟನೆ ಮಾಡಿದ್ದಾರೆ. ದರ್ಗಾದ ಒಳಗಡೆ ಸ್ಮಾರಕದ ಕುರಿತಾದ ನಾಮಫಲಕ ಅಳವಡಿಸಲಾಗಿದೆ. ಅದರ ಮೇಲೆ ರಾಷ್ಟ್ರೀಯ ಲಾಂಛನದ ಚಿಹ್ನೆಯಾದ ಅಶೋಕಸ್ತಂಭದ ಚಿತ್ರವಿದೆ. ಇದನ್ನು ವಿರೋಧಿಸಿರುವ ಮುಸ್ಲಿಂ ಮೂಲಭೂತವಾದಿಗಳು ಚಿಹ್ನೆಯನ್ನು ಒಡೆದು ಹಾಕಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಈ ಕೃತ್ಯವನ್ನು ಜಮ್ಮು ಮತ್ತು ಕಾಶ್ಮೀರದ ಸಿಎಂ ಉಮರ್ ಅಬ್ದುಲ್ ಸಮರ್ಥಿಸಿಕೊಂಡಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ಚಿಹ್ನೆ ಯಾಕೆ ಎಂದು ಕೇಳಿದ್ದಾರೆ. ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದ್ದಾರೆ ಎಂದಿದ್ದಾರೆ. ಇದಕ್ಕೆ ಮಾಜಿ ಸಿಎಂ ಮಹಿಬೂಬ್ ಮುಫ್ತಿ ಸಹ ಸಮರ್ಥಿಸಿಕೊಂಡಿದ್ದು, ಜನರ ಭಾವನೆಗಳಿಗೆ ದಕ್ಕೆ ತಂದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ. ಈ ಮೂಲಕ ದೇಶದ ಚಿಹ್ನೆಯನ್ನು ವಿರೋಧಿಸುವವರ ಬೆನ್ನಿಗೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕೃತ್ಯ ದರ್ಗಾದ ಹೃದಯ ಹಾಗೂ ಭಕ್ತರ ಮೇಲಿನ ನಂಬಿಕೆ ಮೇಲಾದ ಹಲ್ಲೆ. ಇದು ಕೇವಲ ಚಿಹ್ನೆ ಮೇಲಿನ ದಾಳಿಯಲ್ಲ, ಹರತ್ ಬಾಲ್ ಆತ್ಮದ ಮೇಲಿನ ದಾಳಿ ಎಂದು ಮಾಧ್ಯಮಗೋಷ್ಠಿಯಲ್ಲಿ ಡಾ.ಸೈಯದ್ ದರಕ್ಷಾನ್ ಅಂದ್ರಾಬಿ ಹೇಳಿದ್ದಾರೆ.