ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ತನ್ನ ಕೆಟಿಎಂ ಬೈಕ್ ಮಾರಾಟಕ್ಕಿದೆ ಎಂದು ಯವಕನೊಬ್ಬ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ. ಅದನ್ನು ಖರೀದಿಸುವಂತೆ ಗ್ರಾಹಕರ ಸೋಗಿನಲ್ಲಿ ಬಿಂದಿದ್ದ ವ್ಯಕ್ತಿ, ಯುವಕನಿಗೆ ಸೈನೆಡ್ ತಿನಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಆಗಸ್ಟ್ 3, 2016ರಲ್ಲಿ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೆಸ್ಟೀಜ್ ಶಾಂತಿನಿಕೇತನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಸೋಹನ್ ಹಲ್ದಾರ್ ಎಂಬಾತನನ್ನು ಕಾರ್ತಿಕ್ ದೌಲತ್ ಎಂಬಾತ ಬಾಕಿಗೆ ಸಕ್ಕರೆ ಹಾಕುವುದಾಗಿ ಹೇಳಿ ಸೈನೆಡ್ ಹಾಕಿ ಕೊಲೆ ಮಾಡಿದ್ದ. ನಂತರ ಆತನ ಫೋನ್, ವಿವಿಧ ಬ್ಯಾಂಕ್ ಎಟಿಎಂಗಳು, ಕೆಟಿಎಂ ಬೈಕ್, ಹೆಲ್ಮೆಟ್ ಸೇರಿ ಇತರೆ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ನಡೆದು, ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆದು ಇದೀಗ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.