ಪ್ರಜಾಸ್ತ್ರ ಸುದ್ದಿ
ದೇವನಹಳ್ಳಿ(Devanahalli): ತಹಶೀಲ್ದಾರ್ ನಕಲಿ ಸಹಿ ಮಾಡಿ ಮುಜರಾಯಿ ಇಲಾಖೆಯ(Muzrai Department) 63 ಲಕ್ಷ ರೂಪಾಯಿಯನ್ನು ಆರ್ ಐ ಲಪಟಾಯಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ನಡೆದಿದೆ. ಮುಜರಾಯಿ ಇಲಾಖೆಯ ರೆವಿನ್ಯೂ ಇನ್ಸ್ ಪೆಕ್ಟರ್ ಹೇಮಂತಕಮಾರ್ ದೇಸಾಯಿ ಮೋಸದಿಂದ ಹಣ ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ. 2023ರಿಂದ ಇಲ್ಲಿಯ ತನಕ ಇಬ್ಬರು ತಹಶೀಲ್ದಾರ್, ಒಬ್ಬರು ಕೇಸ್ ವರ್ಕರ್ ನಕಲಿ ಸಹಿ ಹಾಗೂ ಸೀಲ್ ಬಳಿಸಿ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನದಿಂದ ಸರ್ಕಾರಕ್ಕೆ ಹಣ ಬಂದಿಲ್ಲ ಎಂದು ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾ ರಾಠೋಡಗೆ ದೂರು ಬಂದಿದೆ. ಹೀಗಾಗಿ ಖಾತೆಯಲ್ಲಿನ ಹಣ ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಇದರ ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದಿದ್ದು ಆರ್ ಐ ಹೇಮಂತಕುಮಾರ್ ದೇಸಾಯಿ. ಬೆಂಗಳೂರಿಗೆ ಮಹಿಳೆಯೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ. ನಂತರ ಅಲ್ಲಿಂದ ಮತ್ತೊಂದು ಖಾತೆಗೆ ವರ್ಗಾವಣೆಯಾಗಿದೆ. ಅದನ್ನು ಆರ್ ಐ ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆರೋಪಿ ಹೇಮಂತಕುಮಾರ್ ದೇಸಾಯಿಯನ್ನು ಅಮಾನತು ಮಾಡಲಾಗಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.