Ad imageAd image

ಮುಂಬೈ ದಾಳಿ: ಭಾರತೀಯರು ಇದಕ್ಕೆ ಅರ್ಹರು ಎಂದಿದ್ದ ತಹವ್ವೂರ್ ರಾಣಾ

Nagesh Talawar
ಮುಂಬೈ ದಾಳಿ: ಭಾರತೀಯರು ಇದಕ್ಕೆ ಅರ್ಹರು ಎಂದಿದ್ದ ತಹವ್ವೂರ್ ರಾಣಾ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಆರೋಪಿ ತಹವ್ವೂರ್ ರಾಣಾ ನೀಡಿದ್ದ ಹೇಳಿಕೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.  ರಾಣಾ ತನ್ನ ಆಪ್ತ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಮುಂದೆ ಭಾರತೀಯರು ಇದಕ್ಕೆ ಅರ್ಹರು ಎಂದು ಹೇಳಿದ್ದನಂತೆ. ದಾಳಿಯ ಕಾರ್ಯಾಚರಣೆ ವೇಳೆ ಎಲ್ಇಟಿ 9 ಭಯೋತ್ಪಾದಕರು ಹತರಾಗಿದ್ದರು. ಅವರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿಯಾದ ನಿಶಾನ್-ಎ-ಹೈದರ್ ನೀಡಬೇಕು ಎಂದು ಹೇಳಿದ್ದನಂತೆ. ಕೆನಡಾದ ಪ್ರಜೆಯಾಗಿರುವ ಇವನು ಪಾಕಿಸ್ತಾನ ಮೂಲದವನು. ಅಂದು ನಡೆದ ದಾಳಿಯಲ್ಲಿ 6 ಜನರ ಮೆರಿಕದವರು ಸೇರಿದಂತೆ 166 ಜನರ ಮೃತಪಟ್ಟಿದ್ದರು.

ಯುಎಸ್ ನಿಂದ ಬುಧವಾರ ರಾತ್ರಿ ಭಾರತಕ್ಕೆ ರಾಣಾ ಹಸ್ತಾಂತರಿಸಲಾಗಿದೆ. ಒಂದು ದಶಕಗಳ ಕಾಲ ಇದಕ್ಕಾಗಿ ಹಲವು ರೀತಿಯ ಪ್ರಯತ್ನಗಳು ನಡೆದಿದ್ದವು. ಹೆಡ್ಲಿ ಪಾಕಿಸ್ತಾನದ ಎಲ್ಇಟಿ ಸಂಘಟನೆಯೊಂದಿಗೆ ನೇರ ಸಂವಹ ನಡೆಸುತ್ತಿದ್ದ. ವಲಸೆ ವ್ಯವಹಾರದ ಶಾಕೆಯನ್ನು ಮುಂಬೈನಲ್ಲಿ ತೆರೆಯಲು ರಾಣಾ ಒಪ್ಪಿಕೊಂಡಿದ್ದ, ಅದಕ್ಕೆ ಹೆಡ್ಲಿಯನ್ನು ಮ್ಯಾನೇಜರ್ ಆಗಿ ನೇಮಿಸಿದ್ದ. ಮುಂಬೈ ದಾಳಿ ಸೇರಿ 10 ಕ್ರಿಮಿನಲ್ ಪ್ರಕರಣಗಳು ರಾಣಾ ಮೇಲಿವೆ. ಭಾರತದಲ್ಲಿ ಇತನನ್ನು ವಿಚಾರಣೆ ನಡೆಸಲು ಹಸ್ತಾಂತರ ಪ್ರಕ್ರಿಯೆ ಪ್ರಮುಖ ಹೆಜ್ಜೆಯಾಗಿದೆ.

2008 ನವೆಂಬರ್ 26 ರಂದು ಉಗ್ರರು ದಾಳಿ ನಡೆಸಿದ್ದರು. ತಾಜ್ ಹೋಟೆಲ್ ಮೇಲಿನ ದಾಳಿಯಿಂದ 166 ಜನರು, ದಕ್ಷ ಪೊಲೀಸ್ ಅಧಿಕಾರಿಗಳು, ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಈ ದಾಳಿ ವೇಳೆ ಉಗ್ರ ಅಜ್ಮಲ್ ಕಸಬ್ ಜೀವಂತವಾಗಿ ಸಿಕ್ಕಿದ್ದ, ಸಾಕಷ್ಟು ವಿಚಾರಣೆ ಬಳಿಕ ಗಲ್ಲಿಗೆ ಏರಿಸಲಾಯಿತು.

WhatsApp Group Join Now
Telegram Group Join Now
TAGGED:
Share This Article